ಭಾರತ-ಯುಎಸ್​ ಟ್ರೇಡ್​ ಡೀಲ್​! ಅಮೆರಿಕದ ಈ ವಸ್ತುಗಳ ಬೆಲೆ ಅಗ್ಗ; ನಮ್ಮ ಡೈರಿ ಉತ್ಪನ್ನಗಳು ಸೇಫ್​! ಇಲ್ಲಿದೆ ನೋಡಿ ಪಟ್ಟಿ | India-US Trade Deal

ಭಾರತ-ಯುಎಸ್​ ವ್ಯಾಪಾರ ಒಪ್ಪಂದ
ಭಾರತ-ಯುಎಸ್​ ವ್ಯಾಪಾರ ಒಪ್ಪಂದ
Published on

ಪ್ರಮುಖ ಮುಖ್ಯಾಂಶಗಳು

  • ಎರಡೂ ದೇಶಗಳ ನಡುವಿನ ಸಂಬಂಧ ಇನ್ನಷ್ಟು ಗಟ್ಟಿ
  • ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ದೇಶದ ರೈತರ ಉತ್ಪನ್ನಗಳು ಸೇಫ್​
  • ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್​ ಸ್ಪಷ್ಟನೆ
  • ಅಮೆರಿಕದ ಯಾವೆಲ್ಲ ವಸ್ತುಗಳು ಭಾರತದಲ್ಲಿ ಅಗ್ಗ? ಇಲ್ಲಿದೆ ವಿವರ
ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯೆ ನಡೆದ ಅದೊಂದು ದೂರವಾಣಿ ಸಂಭಾಷಣೆ ಇದೀಗ ಎರಡೂ ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಯಾಗಿಸಿದೆ (India-US Trade Deal). ಈ ವೇಳೆ ಪ್ರಮುಖ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿರುವ ಭಾರತ-ಯುಎಸ್​ ಇದೀಗ ಹಲವು ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿರುವುದು ಗಮನಾರ್ಹ. 
ಭಾರತದ ಮೇಲಿನ ಆಮದು ಸುಂಕವನ್ನು ಶೇ.18ಕ್ಕೆ ಇಳಿಸಿದ ಟ್ರಂಪ್, ಒಪ್ಪಂದದ ಅಧಿಕೃತ ಕರಡನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದರು. ಇದಕ್ಕೂ ಮೊದಲು ಭಾರತದ ಮೇಲೆ ದಂಡವಾಗಿ ವಿಧಿಸಲಾಗಿದ್ದ ಶೇ.25ರಷ್ಟು ಸುಂಕವನ್ನು ಸಂಪೂರ್ಣವಾಗಿ ತೆಗೆದುಹಾಕಿರುವ ಅಮೆರಿಕ, ಇನ್ಮುಂದೆ ಭಾರತ ರಷ್ಯಾದಿಂದ ತೈಲ ಖರೀದಿ ಮಾಡೋದಿಲ್ಲ. ಬದಲಿಗೆ ಅಮೆರಿಕ ಮತ್ತು ವೆನಿಜುವೆಲಾದಿಂದ ಖರೀದಿಸಲಿದೆ ಎಂದು ಹೇಳಿತು. 
ಈ ಒಪ್ಪಂದದ ಬೆನ್ನಲ್ಲೇ ಅಮೆರಿಕದಿಂದ ಬರುವ ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ಭಾರತ ಸಂಪೂರ್ಣವಾಗಿ ಕಡಿತಗೊಳಿಸಲಿದೆ ಅಥವಾ ಕಡಿಮೆ ಮಾಡಲಿದೆ ಎಂದು ವರದಿಯಾಗಿದೆ. ಈ ಕ್ರಮವು ಭಾರತೀಯ ಗ್ರಾಹಕರಿಗೆ ಹಲವಾರು ಅಮೇರಿಕನ್ ಆಮದುಗಳನ್ನು ಅಗ್ಗವಾಗಿಸುವ ನಿರೀಕ್ಷೆಯಿದೆ ಎಂಬುದು ಇಂದು (ಫೆ.07) ಭಾರತ ಮತ್ತು ಅಮೆರಿಕ ಘೋಷಿಸಿದ ಜಂಟಿ ಹೇಳಿಕೆಯಲ್ಲಿ ತಿಳಿದುಬಂದಿದೆ.

ವಾಣಿಜ್ಯ ಸಚಿವರ ಮಾತು... 

ರೈತರ ಹೊಟ್ಟೆ ಮೇಲೆ ಹೊಡೆಯಲ್ಲ ಎಂದಿರುವ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್​, ರೈತರ ಹಿತಾಸಕ್ತಿಯೇ ನಮ್ಮ ಆದ್ಯತೆ. ಅವರಿಗೆ ಮೋಸ ಆಗಲು ನಾವು ಬಿಡೋದಿಲ್ಲ ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ. ಟ್ರಂಪ್​ ರಾಷ್ಟ್ರದ ಒತ್ತಡಕ್ಕೆ ಮಣಿದು ನಮ್ಮ ಕೃಷಿ ಉತ್ಪನ್ನಗಳ ಮೇಲೆ ಯಾವುದೇ ವಿನಾಯಿತಿಯನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಗೋಯಲ್​ ಹೇಳಿಕೆಯಲ್ಲಿ, ಹಾಲು, ಧಾನ್ಯ ಮತ್ತು ತರಕಾರಿಗಳು ವಿನಾಯಿತಿಯಿಂದ ಸುರಕ್ಷಿತವಾಗಿದೆ.  

ಅಮೆರಿಕದ ಈ ಉತ್ಪನ್ನಗಳು ಭಾರತದಲ್ಲಿ ಅಗ್ಗ!

ಈ ಟ್ರೇಡ್​ ಡೀಲ್​ನಲ್ಲಿ​, ಅಮೆರಿಕ ಜವಳಿ, ಪಾದರಕ್ಷೆಗಳಿಂದ ಹಿಡಿದು ಔಷಧಗಳು ಮತ್ತು ವಿಮಾನದ ಭಾಗಗಳ ಮೇಲಿನ ಸುಂಕವನ್ನು ಶೇ.50ರಿಂದ ಶೇ.18ಕ್ಕೆ ಇಳಿಸಿದೆ. ಈ ಮೂಲಕ ಭಾರತೀಯ ರಫ್ತಿಗೆ ದೊಡ್ಡ ಮಾರುಕಟ್ಟೆಯನ್ನು ತೆರೆದಿರುವುದು ಗಮನಾರ್ಹ. ಅಮೆರಿಕದಿಂದ ಭಾರತಕ್ಕೆ ಬರುವ ಸುಂಕ ಕಡಿತಕ್ಕೆ ಒಳಪಟ್ಟಿರುವ ಉತ್ಪನ್ನಗಳ ಪೈಕಿ ಡ್ರೈ ಡಿಸ್ಟಿಲರ್‌ಗಳ ಧಾನ್ಯಗಳು (DDGs), ಪಶು ಆಹಾರಕ್ಕೆ ಬಳಸುವ ಕೆಂಪು ಸೋರ್ಗಮ್, ಮರದ ಬೀಜಗಳು, ತಾಜಾ ಮತ್ತು ಸಂಸ್ಕರಿಸಿದ ಹಣ್ಣುಗಳು, ಸೋಯಾಬೀನ್ ಎಣ್ಣೆ, ವೈನ್​, ಮದ್ಯ ಮತ್ತು ಇತ್ಯಾದಿ.

ಹಾಲು, ಧಾನ್ಯ... ಈ ಉತ್ಪನ್ನಗಳ ಮೇಲೆ ಅಮೆರಿಕಕ್ಕೆ ಸುಂಕ ರಿಯಾಯಿತಿ ಇಲ್ಲ!

1. ಧಾನ್ಯಗಳು: ಅಮರಂಥ್, ರಾಗಿ, ಗೋಧಿ,​ ಬಾರ್ನ್ಯಾರ್ಡ್ ರಾಗಿ, ಜೋಳ, ಅಕ್ಕಿ, ಬಾರ್ಲಿ, ಜೋಳ, ಬಾಜ್ರಾ, ಕಾಂಗ್ನಿ. 
2. ಪಾಲಿಶ್ ಮಾಡದ ಧಾನ್ಯಗಳು: ಮೈದಾ (ಸಂಸ್ಕರಿಸಿದ ಹಿಟ್ಟು), ಗೋಧಿ, ಜೋಳ, ಅಕ್ಕಿ, ಬಾಜ್ರಾ, ಇತ್ಯಾದಿ
3. ಡೈರಿ ಉತ್ಪನ್ನಗಳು: ಹಾಲು, ಚೀಸ್​, ಕ್ರೀಮ್​, ಬೆಣ್ಣೆ, ಬಟರ್​ ಆಯಿಲ್​, ಬೆಣ್ಣೆ ಮತ್ತು ತುಪ್ಪ, ಮೊಸರು, ಲಸ್ಸಿ, ವೇ ಪ್ರಾಡಕ್ಟ್​ಗಳು
4. ತರಕಾರಿ, ಬೇಳೆಕಾಳುಗಳು: ಕೋಲ್ಡ್​ ಸ್ಟೋರ್ಡ್​ ತರಕಾರಿಗಳು, ಆಲೂಗಡ್ಡೆ, ಬಟಾಣಿ, ಬೀನ್ಸ್, ಇತರ ದ್ವಿದಳ ಧಾನ್ಯಗಳು ಮತ್ತು ತರಕಾರಿಗಳು, ಮಿಕ್ಸೆಡ್​ ಫ್ರೋಜನ್​ ಹಾಗೂ ಕೆಲವು ದಿನಗಳಿಗಷ್ಟೇ ಸೀಮಿತವಾದ ತರಕಾರಿಗಳು. ಸೌತೆಕಾಯಿ ಮತ್ತು ಅಣಂಬೆಗಳು (ಅಗಾರಿಕಸ್ ಪ್ರಭೇದ)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net