ಬ್ಯಾಂಕಿನಲ್ಲಿ ಪ್ರೊಬೇಷನರಿ ಅಧಿಕಾರಿ (PO) ಓರ್ವ ಆರಂಭಿಕ ಹಂತದ ವ್ಯವಸ್ಥಾಪಕರಾಗಿದ್ದು, ಅವರು ಗ್ರಾಹಕ ಸೇವೆ, ದೈನಂದಿನ ಕಾರ್ಯಾಚರಣೆ ಮತ್ತು ಖಾತೆಗಳನ್ನು ನಿರ್ವಹಿಸುವುದು, ನಗದು, ಸಾಲಗಳು ಮತ್ತು ವಹಿವಾಟುಗಳು ಸೇರಿದಂತೆ ಬ್ಯಾಂಕಿಂಗ್ನ ಎಲ್ಲಾ ಅಂಶಗಳನ್ನು ಕಲಿಯುತ್ತಾರೆ. ಅವರು ಸಿಬ್ಬಂದಿಯನ್ನು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ನಿಯಮಗಳು ಮತ್ತು ನಿಬಂಧನೆಗಳ ಸರಿಯಾಗಿ ಅನುಸರಿಸಲಾಗುತ್ತಿದೆಯೇ ಎಂಬುದನ್ನು ನೋಡಿಕೊಳ್ಳುತ್ತಾರೆ. ವೈಯಕ್ತಿಕ ಬ್ಯಾಂಕಿಂಗ್ನಿಂದ ಗ್ರಾಮೀಣ ಬ್ಯಾಂಕಿಂಗ್, ಕ್ರೆಡಿಟ್, ಫಾರೆಕ್ಸ್, ಖಜಾನೆವರೆಗೆ ಎಸ್ಬಿಐನ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ಅವಕಾಶಗಳು ಇದರಲ್ಲಿ ಸೇರಿವೆ, (ಏಜೆನ್ಸೀಸ್).