ವಿದೇಶಿ ವಿನಿಮಯ ಮೀಸಲು ಉಳಿತಾಯ: ಭಾರತದ ವಾರ್ಷಿಕ ಚಿನ್ನದ ಆಮದು ಬಿಲ್ ಸರಿಸುಮಾರು 60 ಬಿಲಿಯನ್ ಡಾಲರ್. ತಜ್ಞರ ಪ್ರಕಾರ, ಗೋಲ್ಡ್ ಇಂಪೋರ್ಟ್ ಶೇ.10ರಷ್ಟು ಕಡಿಮೆಯಾದರೆ, 5ರಿಂದ 6 ಬಿಲಿಯನ್ ಉಳಿತಾಯವಾಗಲಿದೆ. ಅದೇ ಶೇ.50ರಷ್ಟು ಇಳಿಕೆಯಾದರೆ, 30 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಉಳಿಯಲಿದೆ. ಒಂದು ವೇಳೆ ಶೇ.75ರಷ್ಟು ಕಡಿತವಾದರೆ, ಭಾರತಕ್ಕೆ ಬರೋಬ್ಬರಿ 44 ಬಿಲಿಯನ್ ಡಾಲರ್ ಉಳಿತಾಯವಾಗಲಿದೆ.