ಸಾಮಾನ್ಯವಾಗಿ ಹೊರಗಿನ ರಾಜ್ಯಗಳ ಮೈಲಿಗಲ್ಲುಗಳ ಮೇಲೆ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಊರಿನ ಹೆಸರನ್ನು ಬರೆಯಲಾಗಿರುತ್ತದೆ. ಕೆಲವು ರಾಜ್ಯಗಳಲ್ಲಿ ಮಾತ್ರ ಅಲ್ಲಿನ ಭಾಷೆಯಲ್ಲಿಯೇ ಅಕ್ಷರಗಳನ್ನು ಬರೆದು, ಕಿ.ಮೀ ಸೂಚಿಸಲಾಗುತ್ತದೆ. ಕೇವಲ ರಾಜ್ಯದಿಂದ ರಾಜ್ಯಕ್ಕೆ ಮಾತ್ರ ಸೀಮತವಾಗದ ಈ ಮೈಲಿಗಲ್ಲುಗಳು, ತಾಲೂಕು, ಗ್ರಾಮಗಳ ದೂರವನ್ನು ಸಹ ತಿಳಿಸುತ್ತದೆ. ನಮ್ಮ ದೇಶವು 58.98 ಲಕ್ಷ ಕಿಲೋಮೀಟರ್‌ಗಳ ವಿಸ್ತಾರವಾದ ರಸ್ತೆಗಳನ್ನು ಹೊಂದಿದ್ದು, ಗ್ರಾಮೀಣ ರಸ್ತೆ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಗಳನ್ನು ಒಳಗೊಂಡಿವೆ.