ಸಾಮಾನ್ಯವಾಗಿ, ಜನರು ಆರ್ಥಿಕತೆ ಅಥವಾ ಬ್ಯಾಂಕುಗಳ ದಿವಾಳಿಯಿಂದ, ತಮ್ಮ ಹಣವನ್ನು ಉಳಿಸಿಕೊಳ್ಳಲು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಮುಂದಾಗುತ್ತಾರೆ. ಭವಿಷ್ಯದಲ್ಲಿ ಚಿನ್ನವೊಂದು ಸುರಕ್ಷಿತ ಆಸ್ತಿ ಎಂಬುದು ತಿಳಿದಿದೆ. ಜಾಗತಿಕ ಪರಿಸ್ಥಿತಿ ಹದಗೆಟ್ಟರೆ, ಚಿನ್ನದ ಬೆಲೆಗಳು ಶೇ.25ರಿಂದ ಶೇ.40ರಷ್ಟು ಏರಿಕೆಯಾಗಬಹುದು ಎಂದು ಬುಲಿಯನ್ ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ. ಹಾಗಿದ್ದಲ್ಲಿ, ಭಾರತದಲ್ಲಿ ಚಿನ್ನದ ಬೆಲೆ 1.9 ಲಕ್ಷದಿಂದ 2.25 ಲಕ್ಷ ರೂ.ಗೆ ತಲುಪುವ ಸಾಧ್ಯತೆಗಳಿದ್ದು, ಇದು ಹೊಸ ದಾಖಲೆಗಳನ್ನು ಸೃಷ್ಟಿಸುತ್ತದೆ ಎಂದು ವಿವರಿಸಲಾಗಿದೆ.