2024 ರಲ್ಲಿ ಆರ್.ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಭೀಕರ ಘಟನೆಯಲ್ಲಿ ಮಗಳನ್ನು ಕಳೆದುಕೊಂಡ ರತ್ನಾ ಅವರು, ಮಹಿಳೆಯರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯ ಕುಸಿತವನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡು ಚುನಾವಣಾ ಕಣಕ್ಕಿಳಿದಿದ್ದರು. "ನನ್ನ ಮಗಳ ಸಾವಿಗೆ ಮಮತಾ ಬ್ಯಾನರ್ಜಿ ಮತ್ತು ಅವರ ಭ್ರಷ್ಟ ಪಕ್ಷದ ನಾಯಕರೇ ಕಾರಣ. ಜನತೆ ನನಗೆ ಅದ್ಭುತ ಬೆಂಬಲ ನೀಡುತ್ತಿದ್ದಾರೆ. ನಾನು ವೈದ್ಯೆಯಲ್ಲದಿದ್ದರೂ, ಜನಪ್ರತಿನಿಧಿಯಾಗಿ ನನ್ನ ಮಗಳ ಸೇವೆಯ ಉದ್ದೇಶವನ್ನು ಮುಂದುವರಿಸುತ್ತೇನೆ," ಎಂದು ರತ್ನಾ ದೆಬ್‌ನಾಥ್ ಭಾವೋದ್ವೇಗದಿಂದ ನುಡಿದರು.