ಪಶ್ಚಿಮ ಬಂಗಾಳದ ಭಾಂಗರ್ ಬಾಂಬ್ ಸ್ಫೋಟ ಪ್ರಕರಣ; ಟಿಎಂಸಿ ಮಾಜಿ ಶಾಸಕ ಸೌಕತ್ ಮೊಲ್ಲಾ ಬಂಧಿಸಿದ ಎನ್​ಐಎ | Soukat Mollah

ಟಿಎಂಸಿ ಮಾಜಿ ಶಾಸಕ ಸೌಕತ್ ಮೊಲ್ಲಾ
ಟಿಎಂಸಿ ಮಾಜಿ ಶಾಸಕ ಸೌಕತ್ ಮೊಲ್ಲಾ
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಭಾಂಗರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಟಿಎಂಸಿ ಮಾಜಿ ಶಾಸಕ ಸೌಕತ್ ಮೊಲ್ಲಾ(Soukat Mollah) ಅವರನ್ನು ಪ್ರಮುಖ ಸಂಚುಕೋರ ಎಂದು ಆರೋಪಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ತಲೆಮರೆಸಿಕೊಂಡಿದ್ದ ಆತನನ್ನು ಶನಿವಾರ(ಜೂ. 06) ಬಂಧಿಸಲಾಗಿದೆ ಎಂದು ಹೇಳಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಎನ್​ಐಎ ಅಧಿಕಾರಿಗಳು, ಮಾರ್ಚ್ 19ರಂದು ಕಚ್ಚಾ ಬಾಂಬ್ ತಯಾರಿಸುವಾಗ ಸ್ಫೋಟ ಸಂಭವಿಸಿತ್ತು. ಪರಿಣಾಮವಾಗಿ ಒಬ್ಬ ಬಾಂಬ್ ತಯಾರಕ ಸಾವನ್ನಪ್ಪಿ, ಇತರ ಹಲವಾರು ಜನರು ಗಾಯಗೊಂಡಿದ್ದರು ಎಂದು ಹೇಳಿದ್ದಾರೆ.
ಪ್ರಕರಣದ ವಿಚಾರಣೆ ಸಮಯದಲ್ಲಿ ಪ್ರಕರಣದಲ್ಲಿ ಬಂಧಿಸಲ್ಪಟ್ಟ ನಾಲ್ಕನೇ ಆರೋಪಿ, ಮತ್ತು ಇತರೆ ಆರೋಪಿಗಳಿಗೆ ಬಾಂಬ್ ತಯಾರಿಸಲು ನಿರ್ದೇಶನ ನೀಡಿದ ಪ್ರಮುಖ ಸಂಚುಕೋರ ಸೌಕತ್ ಮೊಲ್ಲಾ. ಜೊತೆಗೆ ಸ್ಫೋಟದ ಸ್ಥಳವನ್ನು ಹಾಳು ಮಾಡುವಂತೆ ನಿರ್ದೇಶಿಸಿದ್ದರು ಎಂದು ಆರೋಪಿಸಿದ್ದಾರೆ.
ಸ್ಫೋಟದ ನಂತರ ಮೃತ ಮತ್ತು ಗಾಯಗೊಂಡ ವ್ಯಕ್ತಿಗಳನ್ನು ತನ್ನ ಸ್ಕಾರ್ಪಿಯೋ ವಾಹನದಲ್ಲಿ ಸಾಗಿಸಿದ್ದ ಮತ್ತೊಬ್ಬ ಶಂಕಿತನ ಬಂಧನದ ಬಳಿಕ ಮೊಲ್ಲನನ್ನು ಬಂಧಿಸಲಾಗಿದೆ. ಪರಾರಿಯಾಗಿದ್ದ ಆರೋಪಿಯನ್ನು ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಇನ್ನೂ ಗೃಹ ಸಚಿವಾಲಯದ (MHA) ಕೋರಿಕೆಯ ಮೇರೆಗೆ NIA ರಾಜ್ಯ ಪೊಲೀಸರಿಂದ ಈ ಪ್ರಕರಣವನ್ನು ವಹಿಸಿಕೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹೆಚ್ಚುವರಿ ಪಿತೂರಿಗಳಿವೆಯೇ ಎಂದು ನಿರ್ಧರಿಸಲು ಬಂಧಿತ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net