ಆದರೆ, ಈ ಖ್ಯಾತಿಯೇ ಈಗ ವಿಕ್ರಮ್ ಪಾಲಿಗೆ ಮುಳ್ಳಾಗಿದೆ. ಕಳೆದ ಕೆಲವು ದಿನಗಳಿಂದ ವಿಕ್ರಮ್ ಅವರ ಮೊಬೈಲ್‌ಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಕೋಡ್‌ಗಳಿರುವ ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ನಿರಂತರವಾಗಿ ಫೋನ್ ಕರೆಗಳು ಹಾಗೂ ವಿಡಿಯೋ ಕರೆಗಳು ಬರುತ್ತಿವೆ. ಫೋನ್ ಮಾಡಿದ ಅಪರಿಚಿತರು, ಪ್ರಧಾನಿಗೆ ತಿಂಡಿ ಮಾರಿದ್ದಕ್ಕೆ ತೀವ್ರ ಆಕ್ರೋಶ ಹೊರಹಾಕಿದ್ದು, ನಿನ್ನನ್ನು ಮತ್ತು ನಿನ್ನ ಇಡೀ ಕುಟುಂಬವನ್ನು ಬಾಂಬ್ ಇಟ್ಟು ಉಡಾಯಿಸುತ್ತೇವೆ ಎಂದು ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ವಿಕ್ರಮ್ ಕಣ್ಣೀರಿಟ್ಟಿದ್ದಾರೆ. ಇದರಿಂದ ತೀವ್ರ ಹೆದರಿರುವ ಕುಟುಂಬಸ್ಥರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಸದ್ಯ ವಿಕ್ರಮ್ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.