ಬಂಗಾಳದ ಬಹುತೇಕ ಜಿಲ್ಲೆಗಳಲ್ಲಿ ಶೇ. 90 ಕ್ಕಿಂತ ಹೆಚ್ಚು ಮತದಾನವಾಗಿರುವುದು ಸ್ಥಿರ ಪ್ರವೃತ್ತಿಯನ್ನು ತೋರಿಸುತ್ತದೆ. ಅದೇ ರೀತಿ ತಮಿಳುನಾಡಿನಲ್ಲಿ ಕರೂರು ಶೇ. 92.48 ಮತದಾನದೊಂದಿಗೆ ಮುಂಚೂಣಿಯಲ್ಲಿದ್ದರೆ, ಸೇಲಂ, ಧರ್ಮಪುರಿ, ಈರೋಡ್ ಮತ್ತು ನಾಮಕ್ಕಲ್ ಜಿಲ್ಲೆಗಳಲ್ಲಿ ಕೂಡ ಶೇ. 90 ರ ಹತ್ತಿರದಷ್ಟು ಮತದಾನ ದಾಖಲಾಗಿದೆ. ಇದೇ ವೇಳೆ ನಡೆದ ಉಪಚುನಾವಣೆಗಳಲ್ಲಿ ಗುಜರಾತ್ನ ಉಮ್ರೆತ್ನಲ್ಲಿ ಶೇ. 59.04, ಮಹಾರಾಷ್ಟ್ರದ ರಾಹುರಿಯಲ್ಲಿ ಶೇ. 55.70 ಮತ್ತು ಬಾರಾಮತಿಯಲ್ಲಿ ಶೇ. 57.77 ರಷ್ಟು ಮತದಾನವಾಗಿದೆ.