ಬಂಗಾಳದಲ್ಲಿ ಪ್ರಸ್ತುತ ಅಘೋಷಿತ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆ. ಚುನಾವಣೆ ಸೋಲುತ್ತೇವೆ ಎಂಬ ಭಯದಿಂದ ಬಿಜೆಪಿ ಇಡೀ ವ್ಯವಸ್ಥೆಯನ್ನು ಹಳಿತಪ್ಪಿಸಿದೆ, ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರ ಸೇರಿ ಕ್ಷೇತ್ರಗಳ ಪುನರ್ವಿಂಗಡಣೆ ಮತ್ತು ಎನ್ಆರ್ಸಿ ಮೂಲಕ ಜನರ ಪೌರತ್ವ ಕಸಿದುಕೊಳ್ಳಲು ಸಂಚು ರೂಪಿಸಿವೆ ಎಂದು ಗಂಭೀರವಾಗಿ ಆರೋಪ ಮಾಡುತ್ತಾ, ಮೋದಿಜೀ, ನೀವು ಬಂಗಾಳದ ಬಗ್ಗೆ ಅಸೂಯೆ ಹೊಂದಿದ್ದೀರಿ ಎಂದು ಕಿಡಿಕಾರಿದರು.