ಕೋಲ್ಕತ್ತಾದ ಭವಾನಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹೊರಗಿನಿಂದ ತುಂಬಾ ವೀಕ್ಷಕರು ಬಂದಿದ್ದಾರೆ. ಬಿಜೆಪಿ ಏನು ಹೇಳುತ್ತದೋ ಅದನ್ನು ಅವರು ಮಾಡುತ್ತಿದ್ದಾರೆ. ಸುತ್ತಲೂ ನೋಡಿ, ನಮ್ಮ ಎಲ್ಲಾ ಪೋಸ್ಟರ್‌ಗಳನ್ನು ತೆಗೆದುಹಾಕಲಾಗಿದೆ. ಮತದಾನ ಹೀಗೆ ನಡೆಯುತ್ತದೆಯೇ? ಮತ ಚಲಾಯಿಸುವವರು ಮತದಾರರು, ಪೊಲೀಸರು ಅಥವಾ ಭದ್ರತಾ ಪಡೆಗಳಲ್ಲ. ಹೊರಗಿನಿಂದ ಜನರನ್ನು ಕರೆ ತರಲಾಗಿದ್ದು, ಅವರು ತಮಗೆ ತಿಳಿದಿದ್ದನ್ನು ಮಾಡ್ತಿದ್ದು, ಭಯೋತ್ಪಾದನೆ ಕೆಲಸ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.