ಇತ್ತೀಚಿನ ಅಂಕಿಅಂಶಗಳ ಪ್ರಕಾರ, ದೀಪಕ್ ಕುಮಾರ್ ಹಾಲ್ಡರ್ 6,578 ಮತಗಳನ್ನು ಗಳಿಸಿದ್ದರೆ, ಪನ್ನಾಲಾಲ್ ಹಾಲ್ಡರ್ 3,998 ಮತಗಳನ್ನು ಪಡೆಯುವಲ್ಲಿ ಸಫಲರಾಗಿದ್ದಾರೆ. ಇದರೊಂದಿಗೆ ಬಿಜೆಪಿ ಅಭ್ಯರ್ಥಿ ಸದ್ಯ 2,580 ಮತಗಳ ಮುನ್ನಡೆಯಲ್ಲಿದ್ದು, ಇನ್ನೂ ಹಲವು ಸುತ್ತುಗಳ ಎಣಿಕೆ ಬಾಕಿ ಇರುವುದರಿಂದ ಅಂತಿಮ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಕ್ಷೇತ್ರದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಇದ್ದರೂ, ಕಾಂಗ್ರೆಸ್‌ನ ಗೌತಮ್ ಭಟ್ಟಾಚಾರ್ಯ ಮತ್ತು ಸಿಪಿಐಎಂನ ಸಮರ್ ನಯ್ಯಾ ಸೇರಿದಂತೆ ಒಟ್ಟು 10 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷಕ್ಕಿಳಿದಿದ್ದಾರೆ.