ಕೂಲಿ ಕೆಲಸ ಮಾಡಿಕೊಂಡೇ ಗೆದ್ದ ಕಲಿತ ಮಾಝಿಗೂ ಸಚಿವೆ ಸ್ಥಾನ! ಇಲ್ಲಿದೆ ಬಂಗಾಳ ಸಚಿವ ಸಂಪುಟ ಖಾತೆಗಳ ಪೂರ್ಣ ಪಟ್ಟಿ

ಕಲಿತ ಮಾಝಿ, ಸಿಎಂ ಸುವೆಂದು ಅಧಿಕಾರಿ
ಕಲಿತ ಮಾಝಿ, ಸಿಎಂ ಸುವೆಂದು ಅಧಿಕಾರಿ
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಸಂಪುಟದ ಖಾತೆಗಳನ್ನು ಹಂಚಿದ ಸಿಎಂ ಸುವೆಂದು ಅಧಿಕಾರಿ
  • ಮನೆಗೆಲಸ ಮಾಡಿಕೊಂಡಿದ್ದ ಕಲಿತ ಮಾಝಿಗೂ ಸಿಕ್ಕಿತು ಸಚಿವೆ ಸ್ಥಾನ
West Bengal: ಪಂಚರಾಜ್ಯ ಚುನಾವಣೆಯ ಭಾಗವಾಗಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರುವ ಮೂಲಕ ಬಂಗಾಳದಲ್ಲಿ ಹೊಸ ಇತಿಹಾಸ ಸೃಷ್ಟಿಸಿತು. ಸುವೇಂದು ಅಧಿಕಾರಿ ಹಲವಾರು ಸಚಿವರೊಂದಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಖಾತೆಗಳನ್ನು ಹಂಚಿಕೆ ಮಾಡಿದರು. ಇದರಲ್ಲಿ, ಕೂಲಿ ಕೆಲಸ ಮಾಡಿಕೊಂಡಿದ್ದ ಕಲಿತ ಮಾಝಿ, ಟಿಎಂಸಿ ನಾಯಕರ ಎದುರು ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ ಅವರಿಗೂ ಒಂದು ಖಾತೆಯನ್ನು ನೀಡಿ, ಸಚಿವ ಸ್ಥಾನಕ್ಕೇರಿಸಿರುವುದು ವಿಶೇಷ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಭಾರೀ ಸಂಚಲನ ಸೃಷ್ಟಿಸಿದ ಬಿಜೆಪಿ, ಸತತ 15 ವರ್ಷಗಳಿಂದ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನಿರ್ಮಿಸಿದ್ದ ಭದ್ರಕೋಟೆಯನ್ನು ಛಿದ್ರಗೊಳಿಸುವಲ್ಲಿ ಯಶಸ್ವಿಯಾಯಿತು. ಸಿಎಂ ಸುವೇಂದು ಅಧಿಕಾರಿ ಗೃಹ ಸಚಿವಾಲಯವನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದು, ಈ ಹಿಂದೆ ಮನೆಗಳಲ್ಲಿ ಕೆಲಸ ಮಾಡುತ್ತಿದ್ದ ಕಲಿತಾ ಮಾಝಿಗೆ ವಸತಿ ಮತ್ತು ನಗರಾಭಿವೃದ್ಧಿ ಖಾತೆಯ ರಾಜ್ಯ ಸಚಿವರ ಜವಾಬ್ದಾರಿಯನ್ನು ನೀಡಿದ್ದಾರೆ.
ದಿನನಿತ್ಯ ಕೂಲಿ ಕೆಲಸವನ್ನೇ ನಂಬಿಕೊಂಡು, ತಿಂಗಳಿಗೆ 2500 ರೂ. ಆದಾಯ ಬರುವಂತೆ ಜೀವನ ಸಾಗಿಸುತ್ತಿದ್ದ ಕಲಿತ, ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದಲ್ಲದೇ, 12 ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದು ಶಾಸಕಿಯಾಗಿ ರಾಜಕೀಯ ಅಖಾಡಕ್ಕಿಳಿದಿರುವುದು ನಿಜಕ್ಕೂ ಇದೆಲ್ಲ ಸಾಧ್ಯವೇ? ಎಂಬ ಹತ್ತಾರು ಕುತೂಹಲಕಾರಿ ಪ್ರಶ್ನೆಗಳನ್ನು ಕೇಳುವಂತೆ ಮಾಡಿತು.
37 ವರ್ಷ ವಯಸ್ಸಿನ ಕಲಿತಾ ಮಾಝಿ ಪಶ್ಚಿಮ ಬಂಗಾಳ ರಾಜ್ಯದ ಆಸ್ಗ್ರಾಮ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಅವರು ಒಟ್ಟು 1,07,692 ಮತಗಳನ್ನು ಪಡೆದು, ತಮ್ಮ ಎದುರಾಳಿ ಶ್ಯಾಮ ಪ್ರಸನ್ನ ಲೋಹರ್ ಅವರನ್ನು ಬರೋಬ್ಬರಿ 12,535 ಮತಗಳ ಅಂತರದಿಂದ ಸೋಲಿಸಿದರು. 2021ರ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸಿದ್ದ ಮಾಝಿ, ತೃಣಮೂಲ ಕಾಂಗ್ರೆಸ್‌ನ ಅಭೇದಾನಂದ್ ಥಂಡರ್ ವಿರುದ್ಧ 11,815 ಮತಗಳ ಅಂತರದಿಂದ ಸೋತಿದ್ದರು ಎಂಬುದು ಗಮನಾರ್ಹ.

ಪಶ್ಚಿಮ ಬಂಗಾಳದ ಸಂಪೂರ್ಣ ಸಚಿವ ಸಂಪುಟದ ಪಟ್ಟಿ

  • ನಿಶಿತ್ ಪ್ರಾಮಾಣಿಕ್: ಉತ್ತರ ಬಂಗಾಳ ಅಭಿವೃದ್ಧಿ, ಜಲಸಂಪನ್ಮೂಲ ತನಿಖೆ ಮತ್ತು ಅಭಿವೃದ್ಧಿ
  • ಅಶೋಕ್ ಕೀರ್ತಾನಿಯಾ: ಆಹಾರ ಮತ್ತು ಸರಬರಾಜು, ಸಹಕಾರ
  • ದಿಲೀಪ್ ಘೋಷ್: ಪಂಚಾಯತ್‌ ಮತ್ತು ಗ್ರಾಮೀಣಾಭಿವೃದ್ಧಿ, ಕೃಷಿ ಮಾರುಕಟ್ಟೆ
  • ಕ್ಷುದಿರಾಮ್ ತುಡು: ಬುಡಕಟ್ಟು ಅಭಿವೃದ್ಧಿ, ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಮದರಸಾ ಶಿಕ್ಷಣ
  • ಅಗ್ನಿಮಿತ್ರ ಪಾಲ್: ನಗರಾಭಿವೃದ್ಧಿ ಮತ್ತು ಪುರಸಭೆ ವ್ಯವಹಾರಗಳು
  • ದೀಪಕ್ ಬರ್ಮನ್: ಶಾಲಾ ಶಿಕ್ಷಣ, ವಸತಿ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹಾಗೂ ಜವಳಿ
  • ತಪಸ್ ರಾಯ್: ಕೈಗಾರಿಕೆ, ವಾಣಿಜ್ಯ ಮತ್ತು ಉದ್ಯಮ, ಸಾರ್ವಜನಿಕ ಉದ್ಯಮ ಮತ್ತು ಕೈಗಾರಿಕಾ ಪುನರ್ನಿರ್ಮಾಣ
  • ಶಂಕರ್ ಘೋಷ್: ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ
  • ಮನೋಜ್ ಕುಮಾರ್: ಒರಾನ್ ಅರಣ್ಯ ಮತ್ತು ಪರಿಸರ
  • ಅರ್ಜುನ್ ಸಿಂಗ್: ಕಾರ್ಮಿಕ ಮತ್ತು ಸಾರಿಗೆ
  • ಗೌರಿ ಶಂಕರ್ ಘೋಷ್: ಹಿಂದುಳಿದ ವರ್ಗಗಳ ಕಲ್ಯಾಣ, ಸಾಮೂಹಿಕ ಶಿಕ್ಷಣ ವಿಸ್ತರಣೆ ಮತ್ತು ಗ್ರಂಥಾಲಯ ಸೇವೆಗಳು
  • ಜಗನ್ನಾಥ್ ಚಟ್ಟೋಪಾಧ್ಯಾಯ: ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ, ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ
  • ಸ್ವಪನ್ ದಾಸ್‌ಗುಪ್ತ: ಹಣಕಾಸು
  • ಕಲ್ಯಾಣ್ ಚಕ್ರವರ್ತಿ: ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್, ವಿಜ್ಞಾನ ಮತ್ತು ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಆಹಾರ ಸಂಸ್ಕರಣಾ ಕೈಗಾರಿಕೆಗಳು ಮತ್ತು ತೋಟಗಾರಿಕೆ
  • ಶರದ್ವತ್ ಮುಖರ್ಜಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ
  • ಅರುಪ್ ಕುಮಾರ್ ದಾಸ್: ನೀರಾವರಿ ಮತ್ತು ಜಲಮಾರ್ಗಗಳು
  • ಅಜಯ್ ಕುಮಾರ್ ಪೊದ್ದಾರ್: ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್, ಲೋಕೋಪಯೋಗಿ ಇಲಾಖೆ
  • ದುಧ್ ಕುಮಾರ್ ಮಂಡಲ್: ಕೃಷಿ
ರಾಜ್ಯ ಸಚಿವರು (ಇಂಡಿಪೆಂಡೆಂಟ್​ ಚಾರ್ಜ್​)
  • ಮಾಲತಿ ರಾವ ರಾಯ್: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಸಮಾಜ ಕಲ್ಯಾಣ, ಸ್ವಸಹಾಯ ಗುಂಪು ಮತ್ತು ಸ್ವ ಉದ್ಯೋಗ, ಕಾರ್ಯಕ್ರಮ ಮೇಲ್ವಿಚಾರಣೆ
  • ರಾಜೇಶ್ ಮಹಾತ: ಪ್ರಾಣಿ ಸಂಪನ್ಮೂಲ ಅಭಿವೃದ್ಧಿ, ಮೀನುಗಾರಿಕೆ
  • ಇಂದ್ರನೀಲ್ ಖಾನ್: ಯೂತ್​ ಸರ್ವಿಸ್​ ಮತ್ತು ಕ್ರೀಡೆ, ಗ್ರಾಹಕ ವ್ಯವಹಾರಗಳು
ರಾಜ್ಯ ಸಚಿವರು (MoS) (19 ರಾಜ್ಯ ಸಚಿವರಿಗೆ ವಿವಿಧ ಇಲಾಖೆಗಳ ಜವಾಬ್ದಾರಿಗಳನ್ನು ವಹಿಸಲಾಗಿದೆ)
  1. ಜೋಯೆಲ್ ಮುರ್ಮು: ಬುಡಕಟ್ಟು ಅಭಿವೃದ್ಧಿ, ನೀರಾವರಿ ಮತ್ತು ಜಲಮಾರ್ಗ
  2. ಹರೇ ಕೃಷ್ಣ ಬೇರಾ: ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ, ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ
  3. ಆನಂದಮಯ್ ಬರ್ಮನ್: ಸಾರಿಗೆ, ಹಣಕಾಸು
  4. ಅಶೋಕ್ ದಿಂಡಾ: ಕೃಷಿ ಮಾರುಕಟ್ಟೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ಜವಳಿ
  5. ನಾಡಿಯಾರ್ ಚಂದ್ ಬೌರಿ: ಸಾರ್ವಜನಿಕ ಕಾರ್ಯಗಳು, ಹಿಂದುಳಿದ ವರ್ಗಗಳ ಕಲ್ಯಾಣ
  6. ಬಿಶಾಲ್ ಲಾಮಾ: ನಿವಾಸ ಮತ್ತು ಗುಡ್ಡ ವ್ಯವಹಾರಗಳು, ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಮದರಸಾ ಶಿಕ್ಷಣ
  7. ಸಂತನು ಪ್ರಮಾಣಿಕ್: ಆಹಾರ ಮತ್ತು ಸರಬರಾಜು, ಪಂಚಾಯತ್‌ ಮತ್ತು ಗ್ರಾಮೀಣಾಭಿವೃದ್ಧಿ
  8. ಮೌಮಿತಾ ಬಿಸ್ವಾಸ್ ಮಿಶ್ರಾ: ಕೈಗಾರಿಕೆ, ವಾಣಿಜ್ಯ ಮತ್ತು ಉದ್ಯಮಗಳು, ವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನ
  9. ಉಮೇಶ್ ರೈ: ಸಂಸದೀಯ ವ್ಯವಹಾರಗಳು, ನಗರಾಭಿವೃದ್ಧಿ ಮತ್ತು ಪುರಸಭೆ ವ್ಯವಹಾರಗಳು
  10. ಪೂರ್ಣಿಮಾ ಚಕ್ರವರ್ತಿ: ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳು, ಪ್ರವಾಸೋದ್ಯಮ
  11. ಕೌಶಿಕ್ ಚೌಧರಿ: ಶಾಲಾ ಶಿಕ್ಷಣ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು
  12. ಭಾಸ್ಕರ್ ಭಟ್ಟಾಚಾರ್ಯ: ಸಾರ್ವಜನಿಕ ಆರೋಗ್ಯ, ಇಂಜಿನಿಯರಿಂಗ್, ಕಾರ್ಮಿಕ
  13. ದಿಬಾಕರ್ ಘರಾಮಿ: ಸಹಕಾರ, ಅರಣ್ಯ ಮತ್ತು ಪರಿಸರ
  14. ಅಮಿಯಾ ಕಿಸ್ಕು: ಆಹಾರ ಸಂಸ್ಕರಣಾ ಕೈಗಾರಿಕೆ ಮತ್ತು ತೋಟಗಾರಿಕೆ, ಕೃಷಿ
  15. ಕಲಿತ ಮಾಝಿ: ವಸತಿ
  16. ಗಾರ್ಗಿ ದಾಸ್ ಘೋಷ್: ಸಾಂಪ್ರದಾಯಿಕವಲ್ಲದ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳು
  17. ಬಿರಾಜ್ ಬಿಸ್ವಾಸ್: ಕಾನೂನು ಮತ್ತು ನ್ಯಾಯಾಂಗ, ಉತ್ತರ ಬಂಗಾಳ ಅಭಿವೃದ್ಧಿ
  18. ದೀಪಂಕರ್ ಜನ: ಭೂ ಸುಧಾರಣೆಗಳು ಮತ್ತು ನಿರಾಶ್ರಿತರ ಪರಿಹಾರ ಮತ್ತು ಪುನರ್ವಸತಿ, ಸುಂದರಬನ್ ವ್ಯವಹಾರಗಳು‘
  19. ಸುಮನಾ ಸರ್ಕಾರ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net