ಗಂಡ-ಹೆಂಡತಿಯ ಬೀದಿ ರಂಪಾಟಕ್ಕೆ ಐಫೋನ್​ ಕಾರಣ! ಜನರ ಎದುರೇ ಪತಿಯ ಅಂಗಿ ಹರಿದ ಧರ್ಮಪತ್ನಿ ​

ಗಂಡ-ಹೆಂಡತಿಯ ಬೀದಿ ರಂಪಾಟಕ್ಕೆ ಐಫೋನ್​ ಕಾರಣ
ಗಂಡ-ಹೆಂಡತಿಯ ಬೀದಿ ರಂಪಾಟಕ್ಕೆ ಐಫೋನ್​ ಕಾರಣ
Published on

ಪ್ರಮುಖ ಮುಖ್ಯಾಂಶಗಳು

  • ಮದುವೆಯಲ್ಲಿ ಕೊಟ್ಟ ಉಡುಗೊರೆಗೆ ಪತಿ-ಪತ್ನಿ ನಡುವೆ ಜಗಳ
  • ಬೀದಿಯಲ್ಲೇ ಪತಿಯ ಶರ್ಟ್​ ಹರಿದ ಧರ್ಮಪತ್ನಿ
ಮೀರತ್: ಪತಿ-ಪತ್ನಿಯರ ಜಗಳ ಉಂಡು ಮಲಗೋ ತನಕ ಎಂಬ ಮಾತು ನಮ್ಮಲ್ಲಿದೆ. ಆದ್ರೆ, ಇಲ್ಲೊಂದು ಜಟಾಪಟಿ ಬೀದಿಗೆ ಬಂದಿದ್ದಲ್ಲದೇ, ಬಟ್ಟೆ ಹರಿದು ಹೋಗುವ ಮಟ್ಟಿಗೆ ನಡೆದಿರುವುದು ಸದ್ಯ ಸ್ಥಳೀಯರನ್ನು ಬೆರಗಾಗಿಸಿದೆ.
ತಮ್ಮ ಮದುವೆಯಲ್ಲಿ ದುಬಾರಿ ಬೆಲೆಯ ಐಫೋನ್ ಅನ್ನು ಗಂಡ ಸಂಜಿತ್​ಗೆ ಉಡುಗೊರೆಯಾಗಿ ನೀಡಿದ್ದ ಸೋನಮ್​, ತಮ್ಮಿಬ್ಬರ ನಡುವಿನ ಜಗಳದಿಂದ ಬೇಸತ್ತು ವಾಪಾಸ್​ ಕೊಡುವಂತೆ ಕೇಳಿದ್ದರು. ಇದೇ ವಿಚಾರಕ್ಕೆ ಇಬ್ಬರು ಮಧ್ಯೆ ಜೋರು ವಾಗ್ವಾದ ನಡೆದಿದ್ದು, ಮಾತಿನ ಸಮರ ತಾರಕಕ್ಕೇರಿದ ಬೆನ್ನಲ್ಲೇ ನಡುರಸ್ತೆಯಲ್ಲೇ ಪರಸ್ಪರ ಕಿತ್ತಾಡಿಕೊಂಡ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.
ಸೋನಮ್ ಮತ್ತು ಸಂಜಿತ್ ಇಬ್ಬರು ರಸ್ತೆಯಲ್ಲೇ ಎಳೆದಾಡಿಕೊಂಡು ಜಗಳ ಆಡಿದ್ದಾರೆ. ಇದರಿಂದ ಕೆಲ ಸಮಯ ವಾಹನ ಸಂಚಾರಕ್ಕೂ ತೊಂದರೆಯಾಗಿದೆ. ಸಂಜಿತ್​ ಮೇಲಿದ್ದ ಕೋಪವನ್ನು ಆತ ಧರಿಸಿದ್ದ ಅಂಗಿಯನ್ನು ಸಂಪೂರ್ಣವಾಗಿ ಹರಿದು ಹಾಕುವ ಮೂಲಕ ಸೋನಮ್​ ತೀರಿಸಿಕೊಂಡಿರುವುದು ದುರಂತ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್​ ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ವಿಕ್ಟೋರಿಯಾ ಪಾರ್ಕ್ ಬಳಿ ಜಗಳ ನಡೆದಿದ್ದು, ಸೋನಮ್ ಪತಿ ಓರ್ವ ಜಿಮ್ ಟ್ರೇನರ್​ ಎನ್ನಲಾಗಿದೆ. ಸಾರ್ವಜನಿಕರ ಮುಂದೆ ತನ್ನ ಶರ್ಟ್​ ಹರಿದ ಪತ್ನಿಯ ನಡೆಗೆ ಸಿಡಿಮಿಡಿಗೊಂಡ ಸಂಜಿತ್, ಅದನ್ನು ತೆಗೆದು ಅರೆ ಮೈಯಲ್ಲೇ ನಡೆದುಕೊಂಡು ಹೋಗಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸುವ ವೇಳೆಗೆ ಘರ್ಷಣೆ ನಿಂತಿತ್ತು ಎಂದು ವರದಿಯಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net