ಭಾರತ ತಂಡ ನೀಡಿದ್ದ 285 ರನ್ಗಳ ಸ್ಫರ್ಧಾತ್ಮಕ ಬೆನ್ನತ್ತಿದ ನ್ಯೂಜಿಲೆಂಡ್ ತಂಡ 46 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಜೊತೆಯಾದ ಮಿಚೆಲ್ ಮತ್ತು ಯಂಗ್ ಜೋಡಿ 162 ರನ್ಗಳ ಜೊತೆಯಾಟ ನಡೆಸುವ ಮೂಲಕ ಭಾರತದ ಬೌಲರ್ಗಳ ತಾಳ್ಮೆ ಪರೀಕ್ಷಿಸಿದರು. ಅಂತಿಮವಾಗಿ ಯಂಗ್ 87 ರನ್ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಈ ಪಾಲುದಾರಿಕೆಗೆ ತೆರೆಬಿತ್ತು. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಆಗಮಿಸಿದ ಗ್ಲೇನ್ ಪಿಲಿಪ್ಸ್ 25 ಎಸೆತಗಳಲ್ಲಿ 32 ರನ್ ಬಾರಿಸಿ ಸರಣಿ ಸಮಬಲಗೊಳಿಸಿದರು. ಭಾರತ ತಂಡದ ಪರ ಹರ್ಷಿತ್ ರಾಣಾ, ಪ್ರಸಿದ್ಧ ಕೃಷ್ಣ, ಕುಲ್ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.