ಮುಂದುವರೆದು ಮಾತನಾಡಿದ ಚೆಮೆಜೋವ್, ಎಂಜಿನ್‌ಗಳು, ಸಂವೇದಕಗಳು, ಸ್ಟೆಲ್ತ್ ಸಾಮಗ್ರಿಗಳ ತಯಾರಿಕೆ ಸೇರಿದಂತೆ ಸಂಪೂರ್ಣ ಐದನೇ ತಲೆಮಾರಿನ ಎಲ್ಲ ವ್ಯವಸ್ಥೆಯನ್ನು ಭಾರತಕ್ಕೆ ಕೊಡಲು ಮಾಸ್ಕೋ ಸಿದ್ಧವಾಗಿದೆ. ಅಲ್ಲದೆ, ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಭಾರತದ ಕಡೆಯಿಂದ ಯಾವುದೇ ಬೇಡಿಕೆಯು ಸ್ವೀಕಾರಾರ್ಹ ಎಂದು ತಿಳಿಸಿದ್ದಾರೆ.