ರಾಜ್ಯದಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಅತ್ಯಂತ ಬಲಿಷ್ಠವಾಗಿ ಹೊರಹೊಮ್ಮುತ್ತಿರುವುದು ಮತ್ತು ಮೈತ್ರಿಕೂಟಗಳು ಉಲ್ಟಾ ಆಗುತ್ತಿರುವ ಬೆನ್ನಲ್ಲೇ, ತೂತುಕುಡಿಯಲ್ಲಿ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಕನಿಮೊಳಿ ಆಡಿರುವ ಮಾತುಗಳು ರಾಜಕೀಯ ವಲಯದ ಗಮನ ಸೆಳೆದಿವೆ. ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕನಿಮೋಳಿ, ನಾವು ಈಗ ಮಿತ್ರಪಕ್ಷಗಳ ಬಗ್ಗೆ ಯೋಚಿಸಬೇಕಾದ ಕಾಲಘಟ್ಟದಲ್ಲಿದ್ದೇವೆ. ಮೊದಲು ನಮ್ಮನ್ನು ನಾವು ಬಲಪಡಿಸಿಕೊಳ್ಳಬೇಕು, ಸ್ವತಂತ್ರವಾಗಿ ಶಕ್ತಿಶಾಲಿಯಾದರೆ, ಯಾರ ಬೆಂಬಲವೂ ಇಲ್ಲದೆ ಡಿಎಂಕೆ ಅಧಿಕಾರ ಹಿಡಿಯಬಲ್ಲದು. ನಾವು ಶೀಘ್ರದಲ್ಲೇ ಗೆದ್ದು ತೋರಿಸಲಿದ್ದೇವೆ. ನಮ್ಮ ಪಕ್ಷದ ಬಲ ಎಂತಹದ್ದು ಎಂಬುದನ್ನು ಶೀಘ್ರದಲ್ಲೇ ನಿರೂಪಿಸಲಿದ್ದೇವೆ ಎಂದು ಮಿತ್ರಪಕ್ಷಗಳಿಗೆ ನೇರ ಎಚ್ಚರಿಕೆ ನೀಡಿದ್ದಾರೆ.