ಬಯಸಿದ್ರೆ ಪ್ರಧಾನಿ ಮೋದಿಯ ರಾಜಕೀಯ ಜೀವನ ನಾಶಗೊಳಿಸಬಲ್ಲೇ; ಟ್ರಂಪ್ ಹೇಳಿಕೆಗೆ ಸೂಕ್ತ ಕ್ರಮ ಕೈಗೊಳ್ತೇವೆ: ಕೇಂದ್ರ ಸರ್ಕಾರ | Central government

ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್
ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್
Published on
ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ ಎನ್ನಲಾದ, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿರುವ, ಬಯಸಿದ್ರೆ ನಾನು ಪ್ರಧಾನಿ ಮೋದಿಯವರ ರಾಜಕೀಯ ಜೀವನವನ್ನು ನಾಶಗೊಳಿಸಬಲ್ಲೇ ಎಂಬ ಹೇಳಿಕೆ ಬಗ್ಗೆ ಕೇಂದ್ರ ಸರ್ಕಾರ(Central government) ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿದೆ.
ಈ ಕುರಿತು ಗುರುವಾರ(ಫೆ. 12) ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್, ನಾನು ಆ ವಿಡಿಯೋ ನೋಡಿಲ್ಲ. ಆದರೆ ನಿಜಕ್ಕೂ ಅಂತಹ ವಿಡಿಯೋ ಇದ್ದರೆ, ಅದು ನಿಜವಾಗಲಿ ಅಥವಾ ಸುಳ್ಳಾಗಲಿ, ನಾವು ಅದರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷದ ಎಫ್​ಬಿಐ ನಿರ್ದೇಶಕರೊಂದಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಪ್ರಧಾನಿ ಮೋದಿಯನ್ನು ಹೊಗಳುತ್ತಾ, ಮೋದಿ ಒಬ್ಬ ಮಹಾನ್ ವ್ಯಕ್ತಿ, ಅವರು ನನ್ನನ್ನು ಬಹಳ ಪ್ರೀತಿ ಮಾಡ್ತಾರೆ. ಪ್ರೀತಿ ಅಂದ್ರೆ ಬೇರೆ ಅರ್ಥ ಮಾಡಿಕೊಳ್ಳಬೇಡಿ. ಅವರ ರಾಜಕೀಯ ಜೀವನವನ್ನು ನಾಶ ಪಡಿಸಲು ನಾನು ಬಯಸಲ್ಲ. ಆದರೆ ಅವರು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ.
ಭಾರತ-ರಷ್ಯಾ ಜೊತೆ ಉತ್ತಮ ಸಂಬಂಧವಿದೆ. ಹಠಾತ್ ತೈಲ ಖರೀದಿ ನಿಲ್ಲಿಸಿದ್ರೆ ಅವರ ದೇಶದಲ್ಲಿ ರಾಜಕೀಯವಾಗಿ ಸಂಕಷ್ಟ ಎದುರಿಸಬಹುದು. ಹಾಗಾಗಿ ನಾವು ಅವರ ರಾಜಕೀಯ ಜೀವನವನ್ನು ನಾಶಪಡಿಸಲು ಬಯಸಲ್ಲ ಎಂದು ತಮಾಷೆಯಾಗಿ ಹೇಳಿದ್ದರು. ಈಗ ಅದು ಮತ್ತೆ ಭಾರತ-ಯುಎಸ್ ವ್ಯಾಪಾರ ಒಪ್ಪಂದ ಚರ್ಚೆ ಮಧ್ಯ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net