ರಾಜ್ಯಸಭಾ ಸದಸ್ಯೆ ಕೋಯಲ್ ಮಲ್ಲಿಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಮತ್ತೊಬ್ಬ ಸಂಸದರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನಟಿಯಾಗಿ ನಾನು ಅವರನ್ನು ಗೌರವಿಸುತ್ತೇನೆ. ಆದರೆ ಬಿಜೆಪಿ, ಇಡಿ, ಸಿಬಿಐ ಮತ್ತು ಪೊಲೀಸರ ಒತ್ತಡದಿಂದಾಗಿ ಪಕ್ಷ ತೊರೆಯಲು ಬಯಸುವವರು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಹೊರನಡೆಯಬೇಕೆಂದು ವಿನಂತಿಸುತ್ತೇನೆ. ನಾನು ಈಗಷ್ಟೇ ಸಂವಿಧಾನವನ್ನು ಓದಿದ್ದೇನೆ. ನಾವೇನೂ ಹತಾಶರಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.