ಅಂದಹಾಗೆ, ಕಿಂಗ್‌ಫಿಷರ್ ಏರ್‌ಲೈನ್ಸ್ ಕುಸಿತದ ಬಳಿಕ ಕಾನೂನು ಕುಣಿಕೆಯಲ್ಲಿ ವಿಜಯ್ ಮಲ್ಯ ಸಿಲುಕಿದ್ದಾರೆ. ಬಂಧನದ ಭೀತಿಯಿಂದಾಗಿ 2016, ಮಾರ್ಚ್ ತಿಂಗಳಲ್ಲಿ ಭಾರತವನ್ನು ತೊರೆದರು. 9,000 ಕೋಟಿ ರೂ.ಗಳಿಗೂ ಹೆಚ್ಚಿನ ಬ್ಯಾಂಕ್ ಸಾಲವನ್ನು ಮರುಪಾವತಿ ಮಾಡದ ಆರೋಪ ಮಲ್ಯ ಮೇಲಿದೆ. ಹೀಗಾಗಿ ಭಾರತೀಯ ಅಧಿಕಾರಿಗಳು ವಿಜಯ್ ಮಲ್ಯರನ್ನು ಬಂಧಿಸಿ ಕರೆತರಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಐಪಿಎಲ್ ಆರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲಲಿತ್ ಮೋದಿ, ಬಿಡ್ ರಿಗ್ಗಿಂಗ್ ಮತ್ತು ಹಣ ವರ್ಗಾವಣೆ ಸೇರಿದಂತೆ ಹಣಕಾಸಿನ ಅಕ್ರಮಗಳ ಆರೋಪದ ನಂತರ ಐಪಿಎಲ್ ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿದ್ದಾರೆ. ಲಲಿತ್ ಕೂಡ ಬಂಧನ ಭೀತಿಯಿಂದ 2010 ರಲ್ಲಿ ಭಾರತವನ್ನು ತೊರೆದರು, (ಏಜನ್ಸೀಸ್).