ಜಿಟಿ ಕೋಟೆಯಲ್ಲೇ ಆರ್‌ಸಿಬಿ ಬೌಲರ್‌ಗಳ ಅಬ್ಬರ; ಗುಜರಾತ್ ತಂಡವನ್ನು 155 ರನ್‌ಗಳಿಗೆ ಕಟ್ಟಿ ಹಾಕಿದ ಬೆಂಗಳೂರು! | IPL 2026 Final

IPL 2026 Final
IPL 2026 Final
Published on
IPL 2026 Final: 19ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಬೌಲರ್‌ಗಳ ಘಾತಕ ದಾಳಿಗೆ ಗುಜರಾತ್ ಟೈಟನ್ಸ್ (GT) ತತ್ತರಿಸಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಹೈ-ವೋಲ್ಟೇಜ್ ಕದನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡ, ಆರ್‌ಸಿಬಿ ಶಿಸ್ತುಬದ್ಧ ಬೌಲಿಂಗ್‌ಗೆ ನಲುಗಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿದೆ.
ಗುಜರಾತ್ ಟೈಟನ್ಸ್ ತಂಡಕ್ಕೆ ಆರ್‌ಸಿಬಿ ಬೌಲರ್‌ಗಳು ಪವರ್‌ಪ್ಲೇನಲ್ಲೇ ಭಾರಿ ಆಘಾತ ನೀಡಿದರು. ಅಪಾಯಕಾರಿ ಆರಂಭಿಕ ಆಟಗಾರರಾದ ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ ತಮಗೆ ಸಿಕ್ಕ ಜೀವದಾನದ ಸಂಪೂರ್ಣ ಲಾಭ ಪಡೆದು, ಜವಾಬ್ದಾರಿಯುತ ಅರ್ಧಶತಕ ಸಿಡಿಸುವ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು.

ಗುಜರಾತ್ ಟೈಟನ್ಸ್ ತಂಡದ ಸ್ಕೋರ್​ 155/8

ವಾಷಿಂಗ್ಟನ್ ಸುಂದರ್ 50(37)
ನಿಶಾಂತ್​ ಸಿಂಧು 20 (18)
ಜೋಸ್ ಬಟ್ಲರ್ 19(22)

ಆರ್​ಸಿಬಿ ಬೌಲಿಂಗ್

ರಸಿಖ್ ಸಲಾಮ್ 27ಕ್ಕೆ3
ಭುವನೇಶ್ವರ್ ಕುಮಾರ್ 29ಕ್ಕೆ2
ಜೋಶ್ ಹ್ಯಾಜಲ್‌ವುಡ್ 37ಕ್ಕೆ2
ಆರ್‌ಸಿಬಿ ಪರ ಮಾರಕ ದಾಳಿ ಸಂಘಟಿಸಿದ ಯುವ ಬೌಲರ್ ರಸಿಖ್ ಸಲಾಮ್ ದಾರ್ 3 ವಿಕೆಟ್ ಪಡೆದು ಮಿಂಚಿದರೆ, ಅನುಭವಿ ವೇಗಿಗಳಾದ ಜೋಶ್ ಹ್ಯಾಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ತಲಾ 2 ವಿಕೆಟ್ ಉರುಳಿಸಿ ಜಿಟಿ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಹಾಲಿ ಚಾಂಪಿಯನ್ ಆರ್‌ಸಿಬಿ ಬ್ಯಾಕ್ ಟು ಬ್ಯಾಕ್ ಟ್ರೋಫಿ ಎತ್ತಿಹಿಡಿಯಲು ಸಜ್ಜಾಗಿದ್ದರೆ, ಜಿಟಿ ತಂಡವು ತನ್ನ ಎರಡನೇ ಐಪಿಎಲ್ ಮುಕುಟಕ್ಕಾಗಿ ಈ ಮೊತ್ತವನ್ನು ಕಾಪಾಡಿಕೊಳ್ಳುವ (ಡಿಫೆಂಡ್ ಮಾಡುವ) ಕಠಿಣ ಪ್ರಯತ್ನದಲ್ಲಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net