ಅಮಿತ್ ಶಾಗೆ ವಾರ್ನಿಂಗ್; ಇದು ಹಿಟ್ಲರ್​ಶಾಹಿ, ದೇಶಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ಕಿಡಿ | BJP

ಬಿಜೆಪಿ ಸಂಸದ ಸಂಬಿತ್ ಪಾತ್ರ
ಬಿಜೆಪಿ ಸಂಸದ ಸಂಬಿತ್ ಪಾತ್ರ
Published on
ನವದೆಹಲಿ: ಕೆಲವೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಸಿದ್ದತೆ ನಡೆದಿದ್ದು, ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಿಎಂ ಮಮತಾ ಬ್ಯಾನರ್ಜಿ ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ(BJP) ಆರೋಪಿಸಿದ್ದು, ಇದನ್ನು ಹಿಟ್ಲರ್ ಶಾಹಿ ಆಡಳಿತ ಎಂದು ಕರೆದು ವಾಗ್ದಾಳಿ ನಡೆಸಿದೆ.
ಈ ಕುರಿತು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸಂಸದ ಸಂಬಿತ್ ಪಾತ್ರ, ಬಂಕುರಾ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಸಿಎಂ ಬ್ಯಾನರ್ಜಿ ಅವರು ಭಾರತದ ಗೃಹ ಸಚಿವರಿಗೆ ಕೋಲ್ಕತ್ತಾದಲ್ಲಿ ತಾವು ತಂಗಿದ್ದ ಹೋಟೆಲ್‌ನಿಂದ ಹೊರಬರಲು ನಾವು ಅನುಮತಿ ನೀಡಿದ್ದಕ್ಕೆ ಹೊರ ಹೋಗಿದ್ದೀರಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಅಮಿತ್ ಶಾ ಅವರೇ ನೀವು ಹೋಟೆಲ್​ನಲ್ಲಿ ಅಡಗಿ ಕುಳಿತಿದ್ದೀರಿ, ಒಂದು ವೇಳೆ ನಾವು ಬಯಸಿದ್ರೆ ನೀವು ಹೋಟೆಲ್​ನಿಂದ ಆಚೆ ಬರಲು ಸಾಧ್ಯವಾಗಲ್ಲ. ನಮ್ಮ ಅವಕಾಶದಿಂದ ನೀವು ಹೊರಹೋಗಲು ಸಾಧ್ಯವಾಗಿದ್ದಕ್ಕೆ ನೀವು ಅದೃಷ್ಟವಂತರು ಎಂದು ಬೆದರಿಕೆ ಹಾಕಿದ್ದಾರೆ. ಇದು ಕೇಂದ್ರ ಗೃಹ ಸಚಿವರಿಗೆ ಮಾತ್ರವಲ್ಲ, ದೇಶದ ಇಡೀ ಜನರಿಗೆ ಹಾಕಿದ ಬೆದರಿಕೆಯಾಗಿದೆ. ಇದು ಹಿಟ್ಲರ್-ಸಾಹಿ ಮತ್ತು ತನಸಾಹಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಗಾಳದಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ. ನಮ್ಮ ಅಧ್ಯಕ್ಷರಾದ ನಡ್ಡಾ ಅವರು ಭೇಟಿ ನೀಡಿದಾಗಲೂ ನುಸುಳುಕೋರರು ದಾಳಿ ಮಾಡಿದ್ದರು. ಬಂಗಾಳದಲ್ಲಿ ಇಲ್ಲಿಯವರಿಗೆ 300 ಬಿಜೆಪಿ ಕಾರ್ಯಕರ್ತರು ಹತ್ಯೆಯಾಗಿದ್ದಾರೆ. 3 ಸಾವಿರ ಕಾರ್ಯಕರ್ತರು ತಮ್ಮ ಮನೆ, ಸ್ಥಳ ಬಿಟ್ಟು ಬೇರೇಡೆ ಹೋಗಿದ್ದಾರೆ ಎಂದು ಕಿಡಿಕಾರಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net