ಸ್ವದೇಶಕ್ಕೆ ಲಕ್ಷಾಂತರ ಜನ: ಕಳೆದ ಹತ್ತೇ ದಿನಗಳಲ್ಲಿ ಕೊಲ್ಲಿ ರಾಷ್ಟ್ರಗಳಿಂದ ಲಕ್ಷೋಪಲಕ್ಷ ಜನರು ತಮ್ಮ ದೇಶಗಳಿಗೆ ತೆರಳಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ನ ತಲಾ ಸುಮಾರು 20,000 ನಾಗರಿಕರು ತಮ್ಮ ದೇಶಗಳಿಗೆ ತೆರಳಿದ್ದಾರೆ. ಬ್ರಿಟನ್ನ 3 ಲಕ್ಷ ಪ್ರಜೆಗಳು ಕೊಲ್ಲಿ ರಾಷ್ಟ್ರಗಳಲ್ಲಿದ್ದು, ಅವರಲ್ಲಿಯೂ ಹಲವರು ಸ್ವದೇಶಕ್ಕೆ ಮರಳಿದ್ದಾರೆ. ಇರಾನ್ನಿಂದ ಹೊರಹೋದವರ ಸಂಖ್ಯೆ ಸುಮಾರು 1 ಲಕ್ಷ ಎಂದು ಅಂದಾಜಿಸಲಾಗಿದೆ. ಲೆಬನಾನ್ನಲ್ಲಿಯೂ 60 ಸಾವಿರಕ್ಕೂ ಹೆಚ್ಚು ಜನರು ಮನೆಗಳನ್ನು ತೊರೆದಿದ್ದಾರೆ. ಮಾ. 1ರಿಂದ 7ರವರೆಗಿನ ಒಂದೇ ವಾರದಲ್ಲಿ, ಸುಮಾರು 52,000ಕ್ಕೂ ಹೆಚ್ಚು ಭಾರತೀಯರು ಕೊಲ್ಲಿ ರಾಷ್ಟ್ರಗಳಿಂದ ಭಾರತಕ್ಕೆ ತೆರಳಿದ್ದಾರೆ. ಇವರಲ್ಲಿ ಸುಮಾರು 32,107 ಜನರು ಭಾರತೀಯ ವಿಮಾನಯಾನ ಸಂಸ್ಥೆಗಳ ಮೂಲಕ ಮರಳಿದ್ದಾರೆ (ಮಾಹಿತಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯ).