ಎಸ್‌ಪಿ ವೋಟ್ ಬ್ಯಾಂಕ್ ಈಗ ಬಿಜೆಪಿಯತ್ತ: ಅಖಿಲೇಶ್ ಸಿಎಂ ಕುರ್ಚಿ ಏರಬೇಕಾದ್ರೆ ಓವೈಸಿ ಸಾಥ್ ಬೇಕೇ ಬೇಕು ಎಂದ ಎಐಎಂಐಎಂ ನಾಯಕ! | UP Politics

UP Politics | ಅಖಿಲೇಶ್ ಸಿಎಂ ಕುರ್ಚಿ ಏರಬೇಕಾದ್ರೆ ಓವೈಸಿ ಸಾಥ್ ಬೇಕೇ ಬೇಕು ಎಂದ ಎಐಎಂಐಎಂ ನಾಯಕ!
UP Politics | ಅಖಿಲೇಶ್ ಸಿಎಂ ಕುರ್ಚಿ ಏರಬೇಕಾದ್ರೆ ಓವೈಸಿ ಸಾಥ್ ಬೇಕೇ ಬೇಕು ಎಂದ ಎಐಎಂಐಎಂ ನಾಯಕ!
Published on

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲು ಬಯಸಿದರೆ, ಅವರಿಗೆ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಬೆಂಬಲ ಅಗತ್ಯವಾಗಿದೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತಿಹಾದ್ ಉಲ್ ಮುಸ್ಲಿಮೀನ್ ಹೇಳಿಕೆ ನೀಡಿದೆ.

ಎಐಎಂಐಎಂ ನಾಯಕ ಶಾದಾಬ್ ಚೌಹಾಣ್ ಮಾತನಾಡಿ, ಓವೈಸಿ ಇಲ್ಲದೆ ಯಾದವ್ ಅವರ ರಾಜಕೀಯ ತಂತ್ರವು ಅಪೂರ್ಣವಾಗಿ ಉಳಿಯುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ಸಮಾಜವಾದಿ ಪಕ್ಷದ ಪಿಡಿಎ (ಹಿಂದುಳಿದ, ದಲಿತ, ಅಲ್ಪಸಂಖ್ಯಾತ) ಸೂತ್ರದಲ್ಲಿರುವ ಎ ಎಂದರೆ ಅದು ಅಸಾದುದ್ದೀನ್ ಒವೈಸಿ ಅವರನ್ನೇ ಪ್ರತಿನಿಧಿಸಬೇಕು ಎಂದು ಹೇಳಿದ್ದಾರೆ.
ಅಖಿಲೇಶ್ ಯಾದವ್ ಅವರು ಮುಖ್ಯಮಂತ್ರಿಯಾಗಲು ಬಯಸಿದರೆ, ಅವರು ಅಸಾದುದ್ದೀನ್ ಓವೈಸಿ ಬೆಂಬಲವನ್ನು ಪಡೆಯಲೇಬೇಕು ಎಂದಿರುವ ಚೌಹಾಣ್, ಮುಸ್ಲಿಮರು ತಮ್ಮ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ನಾಯಕನನ್ನು ಆಯ್ಕೆ ಮಾಡಲು ತಮ್ಮ ಮತಗಳನ್ನು ನೀಡಬೇಕು ಎಂದು ಈಗಾಗಲೇ ಮನಸ್ಸು ಮಾಡಿದ್ದಾರೆ ಎಂದರು. ಸಮಾಜವಾದಿ ಪಕ್ಷದ ಪಿಡಿಎ ತಂತ್ರವನ್ನು ನೇರವಾಗಿ ಗುರಿಯಾಗಿಸಿಕೊಂಡ ಚೌಹಾಣ್, ಮೈತ್ರಿಕೂಟದ ಎ ಅಸಾದುದ್ದೀನ್ ಓವೈಸಿ ಅವರನ್ನು ಪ್ರತಿನಿಧಿಸದ ಹೊರತು ಯಾದವ್ ಅವರು ಅಧಿಕಾರಕ್ಕೆ ಮರಳುವ ಕನಸು ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಉತ್ತರ ಪ್ರದೇಶದ ರಾಜಕೀಯ ಪಕ್ಷಗಳು ವಿವಿಧ ಸಾಮಾಜಿಕ ಮತ್ತು ಚುನಾವಣಾ ಗುಂಪುಗಳನ್ನು ಸಂಘಟಿಸಲು ಪ್ರಯತ್ನಿಸುತ್ತಿರುವ ನಡುವೆಯೇ ಎಐಎಂಐಎಂ ನಾಯಕನ ಈ ಹೇಳಿಕೆಗಳು ಹೊರಬಿದ್ದಿವೆ. ಸಮಾಜವಾದಿ ಪಕ್ಷವು ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸುತ್ತ ತನ್ನ ರಾಜಕೀಯ ತಂತ್ರವನ್ನು ರೂಪಿಸಲು ಶ್ರಮಿಸುತ್ತಿದೆ.

ಕಾಂಗ್ರೆಸ್ ಸಂಸದ ಮಸೂದ್ ವಿರುದ್ಧ ಎಐಎಂಐಎಂ ಕಿಡಿ

ವಿರೋಧ ಪಕ್ಷದಲ್ಲಿದ್ದರೂ ಬಿಜೆಪಿಯನ್ನು ಶ್ಲಾಘಿಸುತ್ತಿದ್ದಾರೆ ಎಂದು ಆರೋಪಿಸಿ ಎಐಎಂಐಎಂ ನಾಯಕ ಶಾದಾಬ್ ಚೌಹಾಣ್ ಅವರು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್​​ರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸುತ್ತಾ, ಮಸೂದ್ ಆಡಳಿತಾರೂಢ ಬಿಜೆಪಿಯೊಂದಿಗೆ ನೇರವಾಗಿ ಕೈಜೋಡಿಸಿರುವ ರೀತಿಯಲ್ಲಿ ಆ ಪಕ್ಷವನ್ನು ಹೊಗಳುತ್ತಿದ್ದಾರೆ ಎಂದು ಚೌಹಾಣ್ ಕಿಡಿಕಾರಿದರು.
ಅಖಿಲೇಶ್ ಯಾದವ್ ಅವರು ತಮ್ಮದೇ ಆದ ಸಾಮಾಜಿಕ ಬೆಂಬಲ ನೆಲೆಯತ್ತ ಗಮನ ಹರಿಸಬೇಕು ಎಂದು ಆಗ್ರಹಿಸಿದ ಚೌಹಾಣ್, ಅದರ ಒಂದು ಭಾಗವು ಬಿಜೆಪಿಯತ್ತ ಸಾಗುತ್ತಿದೆ ಎಂದು ಆರೋಪಿಸಿದರು. ಈ ಎಲ್ಲಾ ಹೇಳಿಕೆಗಳು ಉತ್ತರ ಪ್ರದೇಶದ ವಿರೋಧ ಪಕ್ಷಗಳ ನಡುವೆ, ವಿಶೇಷವಾಗಿ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಜಾತಿಯ ಮತಗಳ ಮೇಲೆ ನಡೆಯುತ್ತಿರುವ ರಾಜಕೀಯ ಪೈಪೋಟಿಯನ್ನು ಎತ್ತಿ ತೋರಿಸುತ್ತವೆ. ಎಐಎಂಐಎಂ ಈ ಹಿಂದೆ ರಾಜ್ಯದಲ್ಲಿ ತನ್ನ ಚುನಾವಣಾ ನೆಲೆಯನ್ನು ವಿಸ್ತರಿಸಲು ಯತ್ನಿಸಿತ್ತು, ಆದರೆ ಸಮಾಜವಾದಿ ಪಕ್ಷವು ಬಿಜೆಪಿಯ ವಿರುದ್ಧ ಪ್ರಮುಖ ವಿರೋಧ ಪಕ್ಷವಾಗಿ ತನ್ನನ್ನು ತಾವು ಬಿಂಬಿಸಿಕೊಂಡಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net