ಸಾಕು ಮಾಡಿ ಈ ನಿಮ್ಮ ಡ್ರಾಮಾ... ರಾಹುಲ್​ ಗಾಂಧಿ, ಕಾಂಗ್ರೆಸ್​ಗೆ ಓಪನ್​ ಚಾಲೆಂಜ್​ ಹಾಕಿದ ಸೋನಮ್​ ವಾಂಗ್​ಚುಕ್​ ಪತ್ನಿ

ಸೋನಮ್ ವಾಂಗ್​ಚುಕ್ ಪತ್ನಿ ಗೀತಾಂಜಲಿ
ಸೋನಮ್ ವಾಂಗ್​ಚುಕ್ ಪತ್ನಿ ಗೀತಾಂಜಲಿ
Published on

ಪ್ರಮುಖ ಮುಖ್ಯಾಂಶಗಳು

  • ರಾಹುಲ್ ಗಾಂಧಿ, ಕಾಂಗ್ರೆಸ್​ ಮೇಲೆ ಗೀತಾಂಜಲಿ ಸಿಟ್ಟು
  • ವಿದ್ಯಾರ್ಥಿ ಚಳವಳಿಯಲ್ಲಿ ರಾಜಕೀಯ ತರಬೇಡಿ
  • ಪ್ರತಿಭಟನೆಯಲ್ಲಿ ಪ್ರಾಮಾಣಿಕತೆಯ ಕೊರತೆಯ ಹಿನ್ನೆಲೆ ಟೀಕೆ
ನವದೆಹಲಿ: ಲಡಾಖ್ ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಅವರು ಕಾಂಗ್ರೆಸ್ ಪಕ್ಷ ಮತ್ತು ನಾಯಕ ರಾಹುಲ್ ಗಾಂಧಿ ವಿರುದ್ಧ ಭಾರಿ ಅಸಮಾಧಾನ ಹೊರಹಾಕಿದ್ದಾರೆ.
ವಿದ್ಯಾರ್ಥಿಗಳು ಮತ್ತು ನಾಗರಿಕರ ಹೋರಾಟಗಳನ್ನು ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಪ್ರಧಾನಿ ನಿವಾಸದ ಎದುರು ಕಾಂಗ್ರೆಸ್ ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಪ್ರಾಮಾಣಿಕತೆ ಇಲ್ಲ. ಇದು ಕೇವಲ ಹೈಡ್ರಾಮಾ. ಪ್ರಧಾನಿ ನಿವಾಸದ ಮುಂದೆ ಏಕೆ ಪ್ರತಿಭಟನೆ? ಜಂತರ್ ಮಂತರ್​ಗೆ ಬನ್ನಿ, ಇಲ್ಲಿ ವಿದ್ಯಾರ್ಥಿಗಳ ಜೊತೆ ಸೇರಿ ಹೋರಾಡಿ ಎಂದರು.
ರಾಹುಲ್ ಗಾಂಧಿ ಅವರಿಗೆ ಪ್ರಾಮಾಣಿಕತೆ ಅನ್ನೋದು ಇದ್ದರೆ ಜಂತರ್ ಮಂತರ್​ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಲಿ. ಪ್ರತಿಪಕ್ಷಗಳು ಪ್ರತ್ಯೇಕ ಪ್ರತಿಭಟನೆ ನಡೆಸುವ ಮೂಲಕ ನಾಟಕ ಮಾಡುತ್ತಿವೆ. ಈ ನಡೆ ಅತ್ಯಂತ ಕೃತಕ. ಸೋನಮ್​ ವಾಂಗ್ಚುಕ್ ಅವರ ಮನ್ನಣೆ ಮತ್ತು ವಿದ್ಯಾರ್ಥಿ ಚಳವಳಿಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದನ್ನು ನೋಡಿದರೆ ಜನರು ಖಂಡಿತ ಒಪ್ಪುವುದಿಲ್ಲ ಎಂದು ಹೇಳಿದರು.
ಭಾರತ ಈಗ ಎಚ್ಚೆತ್ತುಕೊಂಡಿದೆ. ಜನರನ್ನು ಯಾರೂ ಏಮಾರಿಸಲು ಸಾಧ್ಯವಿಲ್ಲ. ಇಂದಿನ ಯುವಕರು ಖಂಡಿತವಾಗಿಯೂ ಅಪ್ರಾಮಾಣಿಕ ನಾಯಕರನ್ನು ತಿರಸ್ಕರಿಸುತ್ತಿದ್ದಾರೆ ಎಂದರು. ಕಾಂಗ್ರೆಸ್ ಪ್ರತಿಭಟನೆಗೆ ರಾಷ್ಟ್ರಮಟ್ಟದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಗೀತಾಂಜಲಿ ಅವರ ಈ ಹೇಳಿಕೆಗಳು ಇದೀಗ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಹುಟ್ಟುಹಾಕಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net