

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಸಂದರ್ಭ ಅಥವಾ ಬಳಿಕ ಪ್ರಕಟವಾದ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವ ಬಗ್ಗೆ ನಿಜವಾದ ಮತದಾರರು ವ್ಯಕ್ತಪಡಿಸಿದ ಕಳವಳಿಗೆ ಸಂಬಂಧಿಸಿದಂತೆ ಭಾರತೀಯ ಚುನಾವಣೆ ಪ್ರತಿಕ್ರಿಯಿಸಿದ್ದು, ಫಾರ್ಮ್-6 ಕುರಿತು ಸ್ಪಷ್ಟನೆ ನೀಡಿದೆ.
ಮತಪಟ್ಟಿಯಿಂದ ಕೈಬಿಟ್ಟಿರುವ ಪ್ರಸ್ತುತ ಇರುವ ಅನೇಕ ಮತದಾರರು 'ಫಾರ್ಮ್-6' ಅನ್ನು ಸಲ್ಲಿಸಲು ಹಿಂಜರಿಯುತ್ತಿದ್ದಾರೆ ಎಂಬ ಮಾಹಿತಿ ನಮಗೆ ಲಭ್ಯವಾಗಿದೆ. ಇದಕ್ಕೆ ಕಾರಣವೇನೆಂದರೆ, ಈ ಫಾರ್ಮ್ನಲ್ಲಿ ಅರ್ಜಿದಾರರು ಮೊದಲ ಬಾರಿಗೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಕೋರುತ್ತಿದ್ದಾರೆ" ಎಂಬ ಘೋಷಣೆ ಒಳಗೊಂಡಿದೆ.
ಇದರಿಂದಾಗಿ, 'ಜನತಾ ಪ್ರಾತಿನಿಧ್ಯ ಕಾಯಿದೆ, 1950'ರ ಸೆಕ್ಷನ್ 31ರ ಅಡಿಯಲ್ಲಿ, ತಪ್ಪು ಘೋಷಣೆ ನೀಡಿದ್ದಕ್ಕಾಗಿ ತಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದೇ ಎಂದು ಮತದಾರರು ಆತಂಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಕಾಣೆಯಾಗಿರುವ, ಈಗಾಗಲೇ ಮತದಾರರಾಗಿರುವ ವ್ಯಕ್ತಿಗಳು, ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಮರುಸೇರ್ಪಡೆಗೊಳಿಸಲು 'ಫಾರ್ಮ್-6' ಅನ್ನು ಸಲ್ಲಿಸಬಹುದು ಎಂದು ಆಯೋಗ ಇದೀಗ ಸ್ಪಷ್ಟಪಡಿಸಿದೆ.
ಅರ್ಜಿದಾರರು ಈ ಹಿಂದೆ ಮತದಾರರಾಗಿ ನೋಂದಾಯಿಸಿಕೊಂಡಿದ್ದರೂ ಸಹ, ಇಂತಹ ಸಲ್ಲಿಕೆಯನ್ನು ಸುಳ್ಳು ಘೋಷಣೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಈ ಸ್ಪಷ್ಟನೆಯು ದೆಹಲಿ ಹೈಕೋರ್ಟ್ನ ತೀರ್ಪಿಗೆ ಅನುಗುಣವಾಗಿದೆ. ಮತ್ತು ಇಂತಹ ಪ್ರಕರಣಗಳಲ್ಲಿ ಕಾನೂನು ಪರಿಣಾಮಗಳ ಬಗ್ಗೆ ಇರುವ ಭಯವು ಆಧಾರರಹಿತ ಎಂದು ಆ ತೀರ್ಪು ತಿಳಿಸಿತ್ತು.
ಹೆಚ್ಚುವರಿಯಾಗಿ, ಬೇರೆ ಯಾವುದೇ ಕ್ಷೇತ್ರಗಳಲ್ಲಿ ಮತದಾರರಾಗಿ ನೋಂದಾಯಿಸಿಕೊಳ್ಳದ ಮತ್ತು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು 'ಫಾರ್ಮ್-6' ಅನ್ನು ಸಲ್ಲಿಸುವ ಯಾವುದೇ ಮತದಾರರ ವಿರುದ್ಧ, ಸೆಕ್ಷನ್ 31ರ ಅಡಿಯಲ್ಲಿ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಆಯೋಗವು ನಿರ್ದೇಶನ ನೀಡಿದೆ (ಏಜೆನ್ಸೀಸ್).