ವಿರಾಟ್​ ಕೊಹ್ಲಿ ಬದ್ಧತೆ, ಫೀಲ್ಡಿಂಗ್​ ಮತ್ತು ಬ್ಯಾಟಿಂಗ್​ ಇಡೀ ತಂಡಕ್ಕೆ ಮಾದರಿ: ಮಾಜಿ ಕ್ರಿಕೆಟಿಗ ವಿನಯ್​ ಕುಮಾರ್​ ಅಭಿಪ್ರಾಯ | Vinay Kumar

ವಿರಾಟ್​ ಕೊಹ್ಲಿ ಬದ್ಧತೆ, ಫೀಲ್ಡಿಂಗ್​ ಮತ್ತು ಬ್ಯಾಟಿಂಗ್​ ಇಡೀ ತಂಡಕ್ಕೆ ಮಾದರಿ: ಮಾಜಿ ಕ್ರಿಕೆಟಿಗ ವಿನಯ್​ ಕುಮಾರ್​ ಅಭಿಪ್ರಾಯ
ವಿರಾಟ್​ ಕೊಹ್ಲಿ ಬದ್ಧತೆ, ಫೀಲ್ಡಿಂಗ್​ ಮತ್ತು ಬ್ಯಾಟಿಂಗ್​ ಇಡೀ ತಂಡಕ್ಕೆ ಮಾದರಿ: ಮಾಜಿ ಕ್ರಿಕೆಟಿಗ ವಿನಯ್​ ಕುಮಾರ್​ ಅಭಿಪ್ರಾಯ
Published on
ಬೆಂಗಳೂರು: ವೈಭವ್​ ಸೂರ್ಯವಂಶಿ ಪ್ರತಿಭಾವಂತ ಮತ್ತು ಆಕ್ರಮಣಕಾರಿ ಆಟಗಾರರಾಗಿದ್ದು, ಇಂಥ ಬ್ಯಾಟರ್​ಗಳ ವಿರುದ್ಧ ಹೆಚ್ಚು ವೇರಿಯೇಷನ್​ಗಳನ್ನು ಬಳಸುವುದು ಮತ್ತು ಪಂದ್ಯದಲ್ಲಿ ಸಿಗುವ ಸಣ್ಣ ಅವಕಾಶಗಳನ್ನು ತಣವೇ ವಿಕೆಟ್​ ಆಗಿ ಪರಿವರ್ತಿಸುವುದು ಮುಖ್ಯ ಎಂದು ಜಿಯೋಸ್ಟಾರ್​ ಪರಿಣಿತ ಹಾಗೂ ಮಾಜಿ ವಿನಯ್​ ಕುಮಾರ್​(Vinay Kumar) ಅಭಿಪ್ರಾಯಪಟ್ಟರು.
ಜಿಯೋಸ್ಟಾರ್​ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್​ಸಿಬಿ ತಂಡದ ಪ್ರದರ್ಶನ ಮತ್ತು ಪ್ಲೇಆಫ್​ಗೇರಿದ ಕಾರ್ಯತಂತ್ರ, ರನ್​ರೇಟ್​ ಆಧಾರದ ಮೇಲೆ ಅಗ್ರಸ್ಥಾನ ಪಡೆದಿರುವುದನ್ನು ಶ್ಲಾಸಿದರು.
ಈ ಹಿಂದೆ ಆರ್​ಸಿಬಿ ಕೇವಲ ಅಗ್ರಕ್ರಮಾಂಕ ಬ್ಯಾಟಿಂಗ್​ ನಂಬಿಕೊಂಡಿತ್ತು. ಆದರೆ ಕಳೆದ 2 ಸೀಸನ್​ಗಳಿಂದ ಟಿಮ್​ ಡೇವಿಡ್​, ಜಿತೇಶ್​ ಶರ್ಮಾ, ರಜತ್​ ಪಾಟೀದಾರ್​, ವೆಂಕಟೇಶ್​ ಅಯ್ಯರ್​ ಅವರಂತಹ ಆಟಗಾರರಿಂದಾಗಿ ಮಧ್ಯಮ ಕ್ರಮಾಂಕವು ಅತ್ಯಂತ ಬಲಿಷ್ಠವಾಗಿದೆ. ಇದು ತಂಡದ ಯಶಸ್ಸಿಗೆ ಮುಖ್ಯ ಕಾರಣ.
ತಾವು ಆರ್​ಸಿಬಿ ಪರ 5 ವರ್ಷಗಳಲ್ಲಿ 60&70 ಪಂದ್ಯಗಳನ್ನು ಆಡಿರುವ ಅನುಭವ ಹಂಚಿಕೊಂಡ ಅವರು, ಚಿನ್ನಸ್ವಾಮಿ ಮೈದಾನದಲ್ಲಿ ಬೌಲಿಂಗ್​ ಮಾಡುವುದು ಕಷ್ಟವೇನಲ್ಲ. ಟೆಸ್ಟ್​ ಪಂದ್ಯದ ಮಾದರಿಯಲ್ಲಿ ಸ್ಟಂಪ್​ ಟು ಸ್ಟಂಪ್​ ನಿಖರ ಬೌಲಿಂಗ್​ ಮಾಡಿದರೆ ವಿಕೆಟ್​ ಪಡೆಯಬಹುದು. ಪ್ರಸ್ತುತ ತಂಡದಲ್ಲಿರುವ ಹ್ಯಾಜಲ್​ವುಡ್​, ಭುವನೇಶ್ವರ್​ ಕುಮಾರ್​ ಮತ್ತು ಕೃನಾಲ್​ ಪಾಂಡ್ಯ ಅವರ ಸೇರ್ಪಡೆಯಿಂದ ಬೌಲಿಂಗ್​ ವಿಭಾಗ ಸಮತೋಲನಗೊಂಡಿದೆ.
ವಿರಾಟ್​ ಕೊಹ್ಲಿ 19ನೇ ಸೀಸನ್​ನಲ್ಲೂ ತೋರುತ್ತಿರುವ ಬದ್ಧತೆ, ಫೀಲ್ಡಿಂಗ್​ ಮತ್ತು ಬ್ಯಾಟಿಂಗ್​ ಪ್ರದರ್ಶನ ಇಡೀ ತಂಡಕ್ಕೆ ಮಾದರಿಯಾಗಿದೆ. ಈ ಬಾರಿ ಆರ್​ಸಿಬಿ ಪುರುಷರ ತಂಡವು ಪ್ರಶಸ್ತಿ ಗೆಲ್ಲುವ ಎಲ್ಲಾ ಸಾಧ್ಯತೆಗಳಿವೆ ಎಂದು ವಿನಯ್​ ಕುಮಾರ್​ ವಿಶ್ವಾಸ ವ್ಯಕ್ತಪಡಿಸಿದರು.
ಆರ್​ಸಿಬಿ ಬೌಲಿಂಗ್​ ದಾಳಿಯಲ್ಲಿ ಭುವನೇಶ್ವರ್​ ಕುಮಾರ್​ ಅವರ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ಪ್ಲೇ ಆಫ್​ನಂತಹ ಒತ್ತಡದ ಪಂದ್ಯಗಳಲ್ಲಿ ಭುವಿಅಪಾರ ಅನುಭವದೊಂದಿಗೆ ಬೌಲಿಂಗ್​ ವಿಭಾಗವನ್ನು ಮುನ್ನಡೆಸಲಿದ್ದಾರೆ. ಹ್ಯಾಜಲ್​ವುಡ್​ ಮತ್ತು ರಸಿಕ್​ ಸಲಾಮ್​ ಅವರೊಂದಿಗೆ ಸೇರಿ ಭುವನೇಶ್ವರ್​ ಕುಮಾರ್​ ತಮಗೆ ನೀಡಲಾದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ.
ವರುಣ್​ ಚಕ್ರವರ್ತಿ ಅವರು ಕಾಲಿನ ಗಾಯದಿಂದ ಬಳಲುತ್ತಿದ್ದರೂ ತಂಡದ ಅಗತ್ಯಕ್ಕಾಗಿ ನೋವನ್ನು ಸಹಿಸಿಕೊಂಡು ಬೌಲಿಂಗ್​ ಮಾಡುತ್ತಿರುವುದು ಅವರ ನಿಷ್ಠೆಯನ್ನು ತೋರಿಸುತ್ತದೆ. ಯಾವುದೇ ಆಟಗಾರ ಶೇ.100 ರಷ್ಟು ಫಿಟ್​ ಇರುವುದು ಅಪರೂಪ, ಶೇ. 90 ರಷ್ಟು ಫಿಟ್​ ಇದ್ದರೂ ತಂಡಕ್ಕಾಗಿ ಆಡುವುದು ಕ್ರಿಕೆಟಿಗರ ಸ್ವಭಾವ ಎಂದು ಬೆಂಬಲಿಸಿದರು.
ಟಾಪ್​ 2 ಸ್ಥಾನದಲ್ಲಿ ಮುಗಿಸಿದರೆ ಫೈನಲ್​ ತಲುಪಲು ಮತ್ತೊಂದು ಅವಕಾಶ ಸಿಗುತ್ತದೆ. ಟಿ20 ಕ್ರಿಕೆಟ್​ನಲ್ಲಿ ಯಾವುದೇ ಒಂದು ಣದಲ್ಲಿ ಪಂದ್ಯದ ದಿಕ್ಕು ಬದಲಾಗಬಹುದು, ಹಾಗಾಗಿ ಈ ಬ್ಯಾಕ್​&ಅಪ್​ ಅತ್ಯಗತ್ಯ.
ಕೋಚಿಂಗ್​ ತಂತ್ರ: ಲೀಗ್​ ಹಂತದ 14 ಪಂದ್ಯಗಳನ್ನು ತಲಾ 7 ಪಂದ್ಯಗಳ ಎರಡು ಸಣ್ಣ ಟೂರ್ನಿಗಳಾಗಿ ವಿಂಗಡಿಸಬೇಕು. ಮೊದಲ 7 ಪಂದ್ಯಗಳಲ್ಲಿ ಕನಿಷ್ಠ 5 ಪಂದ್ಯ ಗೆಲ್ಲುವ ಗುರಿ ಹೊಂದಿರಬೇಕು. ಹೀಗೆ ಮಾಡುವುದರಿಂದ ಹಿರಿಯ ಆಟಗಾರರಲ್ಲಿ ಉದಾಸೀನತೆ ಮೂಡುವುದಿಲ್ಲ. ಪಂಜಾಬ್​ ತಂಡವು ಆರಂಭದಲ್ಲಿ ಚೆನ್ನಾಗಿ ಆಡಿ ನಂತರ ಸತತವಾಗಿ ಸೋಲಲು ದೀರ್ಘಾವಧಿಯ ಟೂರ್ನಮೆಂಟ್​ನ ಉದಾಸೀನತೆಯೇ ಕಾರಣವಾಯಿತು. ಆರ್​ಸಿಬಿ ಪ್ರಸ್ತುತ ಪ್ರತಿ ಪಂದ್ಯವನ್ನೂ ಅಷ್ಟೇ ಆಕ್ರಮಣಕಾರಿಯಾಗಿ ಆಡುತ್ತಿರುವುದರಿಂದಲೇ ಅಗ್ರಸ್ಥಾನದಲ್ಲಿದೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net