ಫ್ಯಾನ್ಸ್‌ಗೆ ಟೆನ್ಶನ್ ಕೊಟ್ಟು ಮತ್ತೆ ಇನ್‌ಸ್ಟಾಗ್ರಾಮ್​​​ನಲ್ಲಿ ಪ್ರತ್ಯಕ್ಷವಾದ ವಿರಾಟ್ ಕೊಹ್ಲಿ! ಏನಿದು ನಿಗೂಢ ಕಣ್ಮರೆಯ ರಹಸ್ಯ? Virat Kohli

Virat Kohli
Virat Kohli
Published on
ನವದೆಹಲಿ : (Virat Kohli) ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಇನ್‌ಸ್ಟಾಗ್ರಾಮ್ ಖಾತೆಯು ಜನವರಿ 30ರಂದು (ಶುಕ್ರವಾರ) ದಿಢೀರ್ ಆಗಿ ಕಣ್ಮರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.
ಸುಮಾರು 270 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿರುವ ಕೊಹ್ಲಿ ಅವರ ಖಾತೆ 'ಡಿಆಕ್ಟಿವೇಟ್' ಆಗಿರುವುದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದ ಬೆನ್ನಲ್ಲೇ ಮತ್ತೆ ಆಕ್ಟಿವ್​ ಆಗಿದೆ ಎನ್ನಲಾಗಿದೆ. ಇದು ತಾಂತ್ರಿಕ ದೋಷವೋ ಅಥವಾ ಕೊಹ್ಲಿ ಸ್ವತಃ ತೆಗೆದುಕೊಂಡ ನಿರ್ಧಾರವೋ ಎಂಬುದು ಈಗ ಕ್ರೀಡಾ ಜಗತ್ತಿನಲ್ಲಿ ಬಿಸಿ ವಿಷಯವಾಗಿದೆ.
ಜನವರಿ 30ರ ಮುಂಜಾನೆ ವಿರಾಟ್ ಕೊಹ್ಲಿ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಕಾಣೆಯಾಗಿತ್ತು. ಸರ್ಚ್ ಮಾಡಿದಾಗ 'Profile isn't available' ಎಂಬ ಸಂದೇಶ ಬರುತ್ತಿತ್ತು. ಕೇವಲ ವಿರಾಟ್ ಮಾತ್ರವಲ್ಲದೆ, ಅವರ ಸಹೋದರ ವಿಕಾಸ್ ಕೊಹ್ಲಿ ಅವರ ಇನ್‌ಸ್ಟಾಗ್ರಾಮ್ ಖಾತೆಯೂ ಅದೇ ಸಮಯದಲ್ಲಿ ಡಿಆಕ್ಟಿವೇಟ್ ಆಗಿರುವುದು ಕುತೂಹಲ ಮೂಡಿಸಿತ್ತು.
ವಿರಾಟ್ ಖಾತೆ ಕಾಣದಿದ್ದಾಗ ಕಂಗಾಲಾದ ಅಭಿಮಾನಿಗಳು ಪತ್ನಿ ಅನುಷ್ಕಾ ಶರ್ಮಾ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಿಗೆ ಲಗ್ಗೆ ಇಟ್ಟರು. "ಬಾಬಿ, ಅಣ್ಣನ ಅಕೌಂಟ್ ಏನಾಯ್ತು?" ಎಂದು ಸಾವಿರಾರು ಅಭಿಮಾನಿಗಳು ಕಾಮೆಂಟ್ ಮೂಲಕ ಪ್ರಶ್ನಿಸಿದರು.
ಸುಮಾರು ಎರಡು ಗಂಟೆಗಳ ಕಾಲ ಲಭ್ಯವಿಲ್ಲದಿದ್ದ ಕೊಹ್ಲಿ ಅವರ ಖಾತೆಯು ಬೆಳಿಗ್ಗೆ 8:30ರ ಸುಮಾರಿಗೆ ಮತ್ತೆ ಸಕ್ರಿಯವಾಗಿದೆ. ಇದು ತಾಂತ್ರಿಕ ದೋಷವೇ (Technical Glitch) ಅಥವಾ ಉದ್ದೇಶಪೂರ್ವಕವಾಗಿ ಮಾಡಿದ್ದೇ ಎಂಬ ಬಗ್ಗೆ ವಿರಾಟ್ ಅಥವಾ ಅವರ ತಂಡದಿಂದ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ.
ವಿರಾಟ್ ಅವರ ಇನ್‌ಸ್ಟಾಗ್ರಾಮ್ ಮಾಯವಾಗಿದ್ದರೂ, ಅವರ 'X' (ಟ್ವಿಟರ್) ಖಾತೆ ಸಕ್ರಿಯವಾಗಿಯೇ ಇತ್ತು. ಸದ್ಯಕ್ಕೆ ವಿರಾಟ್ ಲಂಡನ್‌ನಲ್ಲಿದ್ದು, ಮುಂಬರುವ ಐಪಿಎಲ್ 2026ಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net