ಪಾರ್ಟಿ ಅಲ್ಲ, ಅಬ್ಬರವಿಲ್ಲ...ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ವಿರುಷ್ಕಾ ಕ್ರಿಯೇಟಿವ್ ಪಿಕ್! | Virat Kohli Post

Virat Kohli Post | ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ದಂಪತಿ (ಕೃಪೆ-Instagram)
Virat Kohli Post | ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ದಂಪತಿ (ಕೃಪೆ-Instagram)
Published on
Virat Kohli Post: ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ 2025 ರ ತಮ್ಮ ಕೊನೆಯ ಇನ್‌ಸ್ಟಾಗ್ರಾಮ್ ಪೋಸ್ಟ್ ಹಂಚಿಕೊಂಡಿದ್ದು, ನನ್ನ ಜೀವನದ ಬೆಳಕಿನೊಂದಿಗೆ 2026ಕ್ಕೆ ಹೆಜ್ಜೆ ಹಾಕುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
2025-26 ರ ವಿಜಯ್ ಹಜಾರೆ ಟ್ರೋಫಿಯ ವಿರಾಮದ ನಡುವಿನ ಸಮಯದಲ್ಲಿ ಕೊಹ್ಲಿ ದಂಪತಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ.

ವಿರಾಟ್ ಪೋಸ್ಟ್

ಹೊಸ ವರ್ಷಕ್ಕೂ ಒಂದು ದಿನ ಮೊದಲು ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಈ ಫೋಟೋದಲ್ಲಿ ದಂಪತಿಗಳು ತಮ್ಮ ಮುಖದ ಮೇಲೆ ವಿವಿಧ ಬಣ್ಣಗಳ ವಿನ್ಯಾಸಗಳನ್ನು ಮಾಡಿಕೊಂಡಿದ್ದಾರೆ.

ವೈರಲ್ ಫೋಟೋಗೆ ಅಭಿಮಾನಿಗಳ ರಿಯಾಕ್ಷನ್​..

ವಿರಾಟ್ ಫೋಟೋ ಹಂಚಿಕೊಂಡ ಕೆಲವೇ ನಿಮಿಷಗಳಲ್ಲಿ ಸಾವಿರಾರು ಲೈಕ್ಸ್ ಮತ್ತು ಕಾಮೆಂಟ್‌ಗಳು ಹರಿದುಬಂದಿದ್ದು, ಅಭಿಮಾನಿಗಳು ಈ ಜೋಡಿಯ ಸರಳತೆಯನ್ನು ಮೆಚ್ಚಿಕೊಂಡಿದ್ದಾರೆ. ಯಾವಾಗಲೂ ಸ್ಟೈಲಿಶ್ ಆಗಿ ಕಾಣುವ ನೀವು, ಈ ಬಾರಿ ತುಂಬಾ ಕ್ಯೂಟ್ ಆಗಿ ಕಾಣುತ್ತಿದ್ದೀರಿ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಇದು ಅವರ ಮಕ್ಕಳಾದ ವಾಮಿಕಾ ಅಥವಾ ಅಕಾಯ್ ಅವರ ಕಲಾಕೃತಿ ಇರಬಹುದೇ ಎಂದು ತಮಾಷೆಯಾಗಿ ಪ್ರಶ್ನಿಸಿದ್ದಾರೆ.
ಕೊಹ್ಲಿ 2025 ರ ಅಂತ್ಯದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದು, ಕಳೆದೆರಡು ತಿಂಗಳಿನಿಂದ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇತ್ತೀಚಿನ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಸತತ ನಾಲ್ಕು 50+ ರನ್​ ಬಾರಿಸಿದ್ದಾರೆ, ಇದರಲ್ಲಿ ಎರಡು ಶತಕಗಳು ಸೇರಿವೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net