ವೈರಲ್ ವಿಡಿಯೋ: ಕಚ್ಚಿದ ಹಾವನ್ನು ಕೈಯಲ್ಲಿ ಹಿಡಿದು ಚಿಕಿತ್ಸೆಗಾಗಿ ಧರಣಿ ಕೂತ ರಿಕ್ಷಾ ಚಾಲಕ! ಆಸ್ಪತ್ರೆಯಲ್ಲಿ ಹೈಡ್ರಾಮಾ | Rickshaw Driver

ಕೈಯಲ್ಲಿ ಹಾವನ್ನು ಹಿಡಿದಿರುವ ದೀಪಕ್​
ಕೈಯಲ್ಲಿ ಹಾವನ್ನು ಹಿಡಿದಿರುವ ದೀಪಕ್​
Published on
ಮಥುರಾ: ರಿಕ್ಷಾ ಚಾಲಕ(Rickshaw Driver)ನೊಬ್ಬ ಕೈಯಲ್ಲಿ ಮಾರುದ್ದದ ನಾಗರಹಾವನ್ನು ಹಿಡಿದು ಆಸ್ಪತ್ರೆ ಒಳಗೆ ಹೋಗುತ್ತಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.
ವೈರಲ್​ ವಿಡಿಯೋದಲ್ಲಿರುವ ವ್ಯಕ್ತಿ ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ನಿವಾಸಿ ದೀಪಕ್ ಎಂದು ಗುರುತಿಸಲಾಗಿದ್ದು, ಆ ವ್ಯಕ್ತಿಗೆ ಹಾವು ಕಚ್ಚಿದ್ದು, ವಿಷ ನಿರೋಧಕ ಇಂಜೆಕ್ಷನ್ ಪಡೆಯಲು ಆಸ್ಪತ್ರೆಗೆ ಬಂದಿದ್ದಾಗಿ ಮುಖ್ಯ ವೈದ್ಯಕೀಯ ಅಧೀಕ್ಷಕ ನೀರಜ್ ಅಗರ್ವಾಲ್ ತಿಳಿಸಿದ್ದಾರೆ. ದೀಪಕ್​ನ ಈ ವರ್ತನೆಯಿಂದ ಇತರ ರೋಗಿಗಳು ಭಯಪಡುತ್ತಿದ್ದರಿಂದ ಹಾವನ್ನು ಹೊರಗೆ ಬಿಡಲು ಹೇಳಲಾಯಿತು ಎಂದು ಅವರು ಹೇಳಿದರು.
ದೀಪಕ್ ತನ್ನ ಇ-ರಿಕ್ಷಾಗೆ ಬ್ಯಾಟರಿ ತರಲು ವೃಂದಾವನಕ್ಕೆ ಹೋಗುತ್ತಿದ್ದಾಗ, ಮಥುರಾ ಮತ್ತು ವೃಂದಾವನದ ನಡುವಿನ ಪಿಎಂಬಿ ಪಾಲಿಟೆಕ್ನಿಕ್ ಕಾಲೇಜು ಬಳಿ ಹಾವು ಕಚ್ಚಿತು ಎಂದು ಹೇಳಿದ್ದಾನೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ದೀಪಕ್ ನಾನು ವೃಂದಾವನದಿಂದ ಬಂದಿದ್ದೇನೆ. ಮಥುರಾ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ಅರ್ಧ ಗಂಟೆಯಿಂದ ಚಿಕಿತ್ಸೆಗಾಗಿ ಕಾಯುತ್ತಿದ್ದೇನೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಮೂಲಭೂತ ಸೌಲಭ್ಯಗಳಿಲ್ಲ, ನನಗೆ ಚಿಕಿತ್ಸೆ ಕೊಡದಿದ್ದರೆ ರಸ್ತೆಯಲ್ಲಿ ಧರಣಿ ನಡೆಸುವಂತೆ ಹೇಳಿದ್ದಾರೆ.
ನಂತರ, ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ದೀಪಕ್‌ನನ್ನು ಶಾಂತಗೊಳಿಸಿ ಹಾವನ್ನು ಪೆಟ್ಟಿಗೆಯಲ್ಲಿ ಬಂಧಿಸಿದರು.ದೀಪಕ್ ಅವರ ಚಿಕಿತ್ಸೆ ಮುಂದುವರೆದಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ನಂತರ ತಿಳಿಸಿದ್ದಾರೆ.
ವೈರಲ್​ ಆದ ವಿಡಿಯೋಗೆ ತರಾವರಿ ಕಮೆಂಟ್​ಗಳು ಹರಿದುಬಂದಿವೆ. ವಿಷಪೂರಿತ ಹಾವು ಕಚ್ಚಿದರೂ ಆಸ್ಪತ್ರೆಯವರು ಚಿಕಿತ್ಸೆ ನೀಡುತ್ತಿಲ್ಲ ಎನ್ನುವುದು ನಾಚಿಕೆಯ ಸಂಗತಿ ಎಂದು ಒಬ್ಬರು ಹೇಳಿದರೇ, ಕಚ್ಚಿದ ಹಾವನ್ನೇ ಹಿಡಿದು ತಂದಿರುವ ಇವನ ಧೈರ್ಯವನ್ನು ಮೆಚ್ಚಲೇ ಬೇಕು ಎಂದು ಇನ್ನೊಬ್ಬರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, (ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net