ವೈರಲ್ ವಿಡಿಯೋದಲ್ಲಿ ಕಂಡುಬರುವ ದೃಶ್ಯಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ. ಜನರು ತಮ್ಮ ಬೈಕ್ ಮತ್ತು ಕಾರುಗಳನ್ನು ರಸ್ತೆ ಬದಿ ನಿಲ್ಲಿಸಿ, ಗಲೀಜು ಚರಂಡಿ ಎಂಬ ಹಂಗಿಲ್ಲದೆ ಒಳಕ್ಕೆ ಇಳಿದಿದ್ದಾರೆ. ಕೈಗೆ ಸಿಕ್ಕಷ್ಟು ಎಳನೀರುಗಳನ್ನು ಹಿಡಿದು ತಮ್ಮ ಬ್ಯಾಗ್ ಅಥವಾ ವಾಹನಗಳಲ್ಲಿ ತುಂಬಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಇನ್ನೂ ಕೆಲವು ಮಂದಿ ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಾ ನಿಂತಿದ್ದಾರೆಯೇ ಹೊರತು, ಅಪಘಾತಕ್ಕೀಡಾದ ಚಾಲಕನಿಗೆ ಸಹಾಯ ಮಾಡಲು ಯಾರೂ ಮುಂದಾಗಿಲ್ಲ.