ಪ್ಲೀಸ್​​ ನನ್ನನ್ನು ಬಿಟ್ಟು ಹೋಗ್ಬೇಡ...ರೈಲು ನಿಲ್ದಾಣದಲ್ಲಿ ಪ್ರೇಯಸಿಯ ಕಾಲಿಗೆ ಬಿದ್ದ ಯುವಕ! ಮುಂದೇನಾಯ್ತು ನೀವೇ ನೋಡಿ...Viral Video

ಪ್ಲೀಸ್​​ ನನ್ನನ್ನು ಬಿಟ್ಟು ಹೋಗ್ಬೇಡ...ರೈಲು ನಿಲ್ದಾಣದಲ್ಲಿ ಪ್ರೇಯಸಿಯ ಕಾಲಿಗೆ ಬಿದ್ದ ಯುವಕ! ಮುಂದೇನಾಯ್ತು ನೀವೇ ನೋಡಿ...Viral Video
ಪ್ಲೀಸ್​​ ನನ್ನನ್ನು ಬಿಟ್ಟು ಹೋಗ್ಬೇಡ...ರೈಲು ನಿಲ್ದಾಣದಲ್ಲಿ ಪ್ರೇಯಸಿಯ ಕಾಲಿಗೆ ಬಿದ್ದ ಯುವಕ! ಮುಂದೇನಾಯ್ತು ನೀವೇ ನೋಡಿ...Viral Video
Published on

ಪ್ರಮುಖ ಮುಖ್ಯಾಂಶಗಳು

  • ಮುಂಬೈ ರೈಲ್ವೇ ನಿಲ್ದಾಣದಲ್ಲಿ ಯುವತಿಯ ಕಾಲು ಹಿಡಿದು ಬೇಡಿಕೊಂಡ ಯುವಕ ವಿಡಿಯೋ ವೈರಲ್
  • ನನ್ನ ಬಿಟ್ಟು ಹೋಗಬೇಡ ಎಂದು ಪ್ಲಾಟ್‌ಫಾರ್ಮ್ ಮೇಲೆ ಯುವತಿಯ ಕಾಲು ಹಿಡಿದು ಅತ್ತ ಯುವಕ
  • ಮುಂಬೈ ರೈಲ್ವೇ ನಿಲ್ದಾಣದಲ್ಲಿ ಪ್ರೇಮಿಗಳ ಹೈಡ್ರಾಮಾ ಯುವಕನ ವಿಚಾರಣೆ ನಡೆಸಿದ ರೈಲ್ವೇ ಪೊಲೀಸರು
  • ಪ್ರೀತಿಗಾಗಿ ಭಿಕ್ಷೆ ಬೇಡಬೇಡಿ ಎಂದು ಬುದ್ಧಿ ಹೇಳಿದ ನೆಟ್ಟಿಗರು ವೈರಲ್ ವಿಡಿಯೋ ಬಗ್ಗೆ ಪರ ವಿರೋಧ ಚರ್ಚೆ
ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈನ ರೈಲ್ವೇ ನಿಲ್ದಾಣವೊಂದರಲ್ಲಿ ನಡೆದಿದೆ ಎನ್ನಲಾದ ಯುವಕ ಮತ್ತು ಯುವತಿಯ ನಡುವಿನ ಭಾವನಾತ್ಮಕ ಹಾಗೂ ಹೈಡ್ರಾಮಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು ( Viral Video ), ಇಂಟರ್ನೆಟ್ ಜಗತ್ತಿನಲ್ಲಿ ಪರ-ವಿರೋಧ ಚರ್ಚೆಗೆ ನಾಂದಿ ಆಡಿದೆ.
ವೈರಲ್ ಕ್ಲಿಪ್‌ನಲ್ಲಿ ತಿಳಿ ನೀಲಿ ಬಣ್ಣದ ಶರ್ಟ್ ಹಾಗೂ ಕಪ್ಪು ಪ್ಯಾಂಟ್ ಧರಿಸಿರುವ ಯುವಕನೊಬ್ಬ ರೈಲ್ವೇ ಪ್ಲಾಟ್‌ಫಾರ್ಮ್ ಮೇಲೆ ಮಲಗಿ, ರೈಲು ಹತ್ತಲು ಸಿದ್ಧಳಾಗುತ್ತಿದ್ದ ಯುವತಿಯ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡು ಬಿಡದಂತೆ ಬೇಡಿಕೊಳ್ಳುತ್ತಿರುವುದು ಕಂಡುಬಂದಿದೆ.
ಮುಖಕ್ಕೆ ಶಾಲು ಮುಚ್ಚಿಕೊಂಡು ಬೆನ್ನಿಗೆ ಬ್ಯಾಗ್ ಹಾಕಿಕೊಂಡಿರುವ ಹಸಿರು ಮತ್ತು ಬಿಳಿ ಮಿಶ್ರಿತ ಉಡುಪಿನ ಯುವತಿ ಆತನ ಹಿಡಿತದಿಂದ ತನ್ನ ಕಾಲನ್ನು ಬಿಡಿಸಿಕೊಳ್ಳಲು ಸತತವಾಗಿ ಪ್ರಯತ್ನಿಸುತ್ತಿದ್ದರೂ, ಆತ ಮಾತ್ರ ಯಾವುದೇ ಕಾರಣಕ್ಕೂ ಆಕೆಯ ಕಾಲನ್ನು ಬಿಡದೆ ಹಠ ಹಿಡಿದು ಪ್ಲಾಟ್‌ಫಾರ್ಮ್ ಮೇಲೆಯೇ ಬಿದ್ದಿರುವ ಈ ದೃಶ್ಯ ನೆಟ್ಟಿಗರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಆ ಯುವಕ ತನ್ನ ಪ್ರೇಯಸಿ ತನ್ನನ್ನು ಬಿಟ್ಟು ಹೋಗದಂತೆ ಮತ್ತು ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಆದರೆ, ಈ ವಿಡಿಯೋದ ಅಧಿಕೃತ ಮೂಲದ ಬಗ್ಗೆ ಯಾವುದೇ ಖಚಿತತೆ ಇಲ್ಲ.
ಪ್ಲಾಟ್‌ಫಾರ್ಮ್ ಮೇಲೆ ಈ ಹೈಡ್ರಾಮ ನಡೆಯುತ್ತಿದ್ದಂತೆ, ಅಲ್ಲಿ ನೆರೆದಿದ್ದ ಸಾರ್ವಜನಿಕರು ಇದನ್ನು ಕುತೂಹಲದಿಂದ ನೋಡಲು ಆರಂಭಿಸಿದರು. ಜನಸಂದಣಿ ಹೆಚ್ಚಾಗುತ್ತಿದ್ದನ್ನು ಗಮನಿಸಿದ ರೈಲ್ವೇ ರಕ್ಷಣಾ ಪಡೆ (RPF) ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಇಬ್ಬರನ್ನೂ ಸುತ್ತುವರೆದರು. ಒಬ್ಬ ಅಧಿಕಾರಿ ಇಬ್ಬರ ನಡುವೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರೆ, ಮತ್ತೊಬ್ಬ ಅಧಿಕಾರಿ ಅಲ್ಲಿ ಜಮಾಯಿಸಿದ್ದ ಜನರನ್ನು ಆ ಜಾಗದಿಂದ ದೂರ ಸರಿಯುವಂತೆ ಸೂಚಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ವಿಡಿಯೋದ ಮತ್ತೊಂದು ಭಾಗದಲ್ಲಿ, ಸಮವಸ್ತ್ರಧಾರಿ ಪೊಲೀಸರು ಪ್ಲಾಟ್‌ಫಾರ್ಮ್ ಮೇಲೆ ಕುಳಿತಿದ್ದ ಆ ಯುವಕನನ್ನು ತೀವ್ರ ವಿಚಾರಣೆಗೆ ಒಳಪಡಿಸುತ್ತಿರುವುದು ದಾಖಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿದ್ದು, ಸಾವಿರಾರು ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಈ ಘಟನೆಯನ್ನು ಪ್ರೀತಿಯ ಭಾವನಾತ್ಮಕ ಅಭಿವ್ಯಕ್ತಿ ಎಂದು ಬಣ್ಣಿಸಿದ್ದರೆ, ಇನ್ನೂ ಅನೇಕರು ಸಾರ್ವಜನಿಕ ಮತ್ತು ಕಿಕ್ಕಿರಿದ ಜಾಗದಲ್ಲಿ ಇಂತಹ ವರ್ತನೆ ತೀರಾ ಅನುಚಿತ ಮತ್ತು ಜನರಿಗೆ ತೊಂದರೆ ಉಂಟುಮಾಡುವಂತದ್ದು ಎಂದು ಯುವಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ಸಂಪೂರ್ಣ ಹಿನ್ನೆಲೆ ತಿಳಿಯದೆ ಯಾರು ಸಹ ಯಾವುದೇ ನಿರ್ಧಾರಕ್ಕೆ ಬರಬೇಡಿ ಎಂದು ಹಲವರು ಸಲಹೆ ನೀಡಿದ್ದಾರೆ.
ಈ ಬಗ್ಗೆ ಕಾಮೆಂಟ್ ಮಾಡಿರುವ ಬಳಕೆದಾರರೊಬ್ಬರು, ಪ್ರೀತಿ ಎನ್ನುವುದು ಇಬ್ಬರ ನಡುವೆ ಇರಬೇಕಾದ ವಿಚಾರ. ಯಾರನ್ನಾದರೂ ನಿಮ್ಮನ್ನು ಪ್ರೀತಿಸುವಂತೆ ಅಥವಾ ನಿಮ್ಮ ಜೊತೆಗೇ ಇರುವಂತೆ ಬಲವಂತ ಮಾಡಲು ಸಾಧ್ಯವಿಲ್ಲ. ಯಾರಾದರೂ ನಿಮ್ಮನ್ನು ಬಿಟ್ಟು ಹೋಗಲು ಬಯಸಿದರೆ, ಅವರಿಗೆ ಹೋಗಲು ಬಿಡಿ. ನಿಮಗಾಗಿ ಮತ್ತು ಅವರಿಗಾಗಿ ನೀವು ಮಾಡಬಹುದಾದ ಅತ್ಯುತ್ತಮ ಕೆಲಸ ಇದೊಂದೇ. ಪ್ರೀತಿಗಾಗಿ ಎಂದಿಗೂ ಭಿಕ್ಷೆ ಬೇಡಬೇಡಿ ಎಂದು ಬರೆದುಕೊಂಡಿದ್ದಾರೆ.
ಮತ್ತೊಬ್ಬ ನೆಟ್ಟಿಗರು ಇದಕ್ಕೆ ವಿರುದ್ಧವಾಗಿ ಪ್ರತಿಕ್ರಿಯಿಸಿ, ಒಂದೇ ಒಂದು ವಿಡಿಯೋ ನೋಡಿ ಯಾರನ್ನೂ ನಿರ್ಣಯಿಸಬಾರದು. ಅವರ ನಡುವೆ ದೊಡ್ಡ ಜಗಳ ನಡೆದಿರಬಹುದು, ಯುವತಿ ಎಲ್ಲವನ್ನೂ ಸರಿಪಡಿಸಲು ಪ್ರಯತ್ನಿಸಿ ಸೋತಿರಬಹುದು. ಕೊನೆಗೆ ಆಕೆ ಬೇಸತ್ತು ಹೊರಡುವಾಗ, ಯುವಕನಿಗೆ ತನ್ನ ತಪ್ಪಿನ ಅರಿವಾಗಿ ಈ ರೀತಿ ಕಾಲಿಗೆ ಬಿದ್ದಿರಬಹುದು. ಏನೂ ಬೇಕಾದರೂ ನಡೆದಿರಬಹುದು ಎಂದು ಭಿನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಪ್ರಸ್ತುತ ಈ ಘಟನೆಗೆ ಕಾರಣ ಏನೆಂಬುದರ ಬಗ್ಗೆ ರೈಲ್ವೇ ಇಲಾಖೆಯಾಗಲಿ ಅಥವಾ ಮುಂಬೈ ಪೊಲೀಸರಾಗಲಿ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ ಹಾಗೂ ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ ಎಂದು ವರದಿಯಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net