ಮಹಾಕುಂಭಮೇಳದ IIT ಬಾಬಾ ಈಗ ಗೃಹಸ್ಥ; ಸನ್ಯಾಸಿಯಾಗಿದ್ದ ಅಭಯ್​ ಸಿಂಗ್​ಗೆ ಬೆಂಗಳೂರಿನ ಟೆಕ್ಕಿ ಜೊತೆ ಪ್ರೇಮವಾಗಿದ್ದೇಗೆ?..IIT Baba

IIT Baba Marriage
IIT Baba Marriage
Published on

ಪ್ರಮುಖ ಮುಖ್ಯಾಂಶಗಳು

  • 2025ರ ಮಹಾಕುಂಭದಲ್ಲಿ ವೈರಲ್ ಆಗಿದ್ದ 'IIT ಬಾಬಾ' ಬೆಂಗಳೂರಿನ ಯುವತಿ ಜೊತೆ ವಿವಾಹ
  • ಬೆಂಗಳೂರು ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಪ್ರೀತಿಕಾ ಜೊತೆ ಹಿಮಾಚಲದಲ್ಲಿ ಮದುವೆ
  • ಸನಾತನ ಧರ್ಮ, ಆಧುನಿಕ ಶಿಕ್ಷಣ ಸಂಯೋಜಿಸುವ ವಿವಿ ಸ್ಥಾಪನೆಯೇ ಈ ದಂಪತಿಯ ಮುಂದಿನ ಗುರಿ
IIT Baba Marriage: 2025ರ ಮಹಾಕುಂಭಮೇಳ ಸೋಶಿಯಲ್​ ಮೀಡಿಯಾದಲ್ಲಿ ಎರಡು ವಿಚಾರಕ್ಕೆ ಭಾರಿ ವೈರಲ್ ಆಗಿದ್ದು. ಒಂದು ವಿಶಿಷ್ಟ ಕಣ್ಣಿನ ಹುಡುಗಿ ಮೋನಾಲಿಸಾ ಮತ್ತು ಐಐಟಿ ಬಾಬಾ ಎಂದೇ ಗುರುತಿಸಿಕೊಂಡ  ಅಭಯ್​ ಸಿಂಗ್​. ಸದ್ಯ ಈತ ಮತ್ತೆ ಸುದ್ದಿಯಲ್ಲಿದ್ದಾರೆ. 
ಬಾಂಬೆ ಐಐಟಿಯಲ್ಲಿ ಉನ್ನತ ಶಿಕ್ಷಣ, ಕೆನಾಡದಲ್ಲಿ ಲಕ್ಷ ಲಕ್ಷ ಸಂಬಳ..ಎಲ್ಲ ತೊರೆದು ಜೀವನ ಎಂದರೇನು ಎಂದು ಹುಡುಕುತ್ತಾ ಬಂದ ಅಭಯ್​ ಸಿಂಗ್​ಗೆ ಆಕರ್ಷಣೆಯಾಗಿದ್ದು ಆಧ್ಯಾತ್ಮದತ್ತ. ಉದ್ಯೋಗ, ಕುಟುಂಬ, ಪ್ರೀತಿ ತೊರೆದ ಈತ ಸನ್ಯಾಸಿ ದೀಕ್ಷೆ ಪಡೆದು ಅಭಯ್​ ಬದಲಾಗಿ ಐಐಟಿ ಬಾಬಾನಾದ. ಸದ್ಯ ಈಗ ಸಂಸಾರದ ನೌಕೆ ಹೊತ್ತಿದ್ದಾರೆ. ಬೆಂಗಳೂರು ಮೂಲದ ಇಂಜಿನಿಯರ್ ಪ್ರೀತಿಕಾ ಅವರೊಂದಿಗೆ ಶಿವರಾತ್ರಿಯಂದು ಹಿಮಾಚಲ ಪ್ರದೇಶದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಯಾರು ಈ ಐಐಟಿ ಬಾಬಾ
ಹರಿಯಾಣ ಮೂಲದ ಅಭಯ್​ ಸಿಂಗ್​ ಐಐಟಿ ಬಾಂಬೆ ಪಧವೀದರರು. 2024ರಲ್ಲಿ ಏರೋಸ್ಪೇಸ್​ ಇಂಜಿನಿಯರಿಂಗ್​ ಮುಗಿಸಿಕೊಂಡ ಅವರು ಕೆನಡಾದಲ್ಲಿ  ವಾರ್ಷಿಕ 36 ಲಕ್ಷ ರೂ. ಪ್ಯಾಕೇಜ್‌ನ ಹುದ್ದೆಯಲ್ಲಿ ಇದ್ದರು.  ಜೀವನ ಎಂದರೆ ಏನು ಎಂದು ಹುಡುಕುತ್ತ ಬಂದ ಅವರು ಸನ್ಯಾಸ ದೀಕ್ಷೆಯನ್ನು ಪಡೆದು ಐಐಟಿ ಬಾಬಾ ಆದರು.

ಸನ್ಯಾಸಿಗೆ ಪ್ರೇಮವಾಗಗಿದ್ದು ಹೇಗೆ?

ಪ್ರೀತಿಕಾಗೆ ಮತ್ತು ಐಐಟಿ ಬಾಬಾಗೆ ಕಳೆದ ತಿಂಗಳು ಪರಿಚಯವಾಗಿತ್ತು. ಮೊದಲು ಸ್ನೇಹಿತರಾಗಿದ್ದರು. ಆಗಾಗ ಮೀಟಿಂಗ್​, ಡೇಟಿಂಗ್​ ಆಗುತ್ತಿತ್ತು. ಹೀಗೆ ಸ್ನೇಹವು ಪ್ರೀತಿಗೆ ತಿರುಗಿತು. ಅಭಯ್​ ಅವರು ಅತ್ಯಂತ ಸರಳ ಮತ್ತು ಪ್ರಾಮಾಣಿಕ ವ್ಯಕ್ತಿ, ಅವರ ಈ ಗುಣವೇ ನನಗೆ ಇಷ್ಟವಾಯಿತು" ಎಂದು ಪ್ರೀತಿಕಾ ತಿಳಿಸಿದ್ದಾರೆ.  

ಇಬ್ಬರ ಗುರಿಯೇನು?

ಐಐಟಿ ಬಾಬಾ ಅಲಿಯಾಸ್ ಅಭಯ್​ ಸಿಂಗ್​ಗೆ ಮದುವೆಯಾಗಿದ್ದರು, ಸನಾತನ ಧರ್ಮ ಮತ್ತು ಆಧ್ಯಾತ್ಮಿಕತೆ ಬಗ್ಗೆ ಒಲವು ಕಿಂಚಿತ್ತು ಕಡಿಮೆಯಾಗಿಲ್ಲ.  ಇಬ್ಬರು ಜೊತೆಗೂಡಿ ಸನಾತನ ವಿಶ್ವವಿದ್ಯಾಲಯ’ ಸ್ಥಾಪಿಸಬೇಕು ಎನ್ನುವ ಆಶಯವನ್ನು ಇಟ್ಟುಕೊಂಡಿದ್ದಾರಂತೆ. ದಂಪತಿ ಇಬ್ಬರು ಹರಿಯಾಣದ ಜಜ್ಜರ್‌ನಲ್ಲಿ ವಾಸವಿದ್ದಾರೆ. 
ಮಹಾಕುಂಭಮೇಳದಲ್ಲಿ ನಾಗಸಾಧು-ಸಂತರ ಮಧ್ಯೆ ತಮ್ಮನ್ನು ತಾವು ಐಐಟಿ ಬಾಬಾ ಎಂದು ಅವರನ್ನು ಕರೆದುಕೊಂಡು ಗುರುತಿಸಿಕೊಂಡಿದ್ದರು.  ಕುಂಭಮೇಳ ಮುಗಿದು ಕೆಲದ ದಿನಗಳಲ್ಲಿ ಗಾಂಜಾ ಕೇಸ್​ನಲ್ಲಿ ಬಂಧಿಸಿಮ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು,. ಈ ಘಟನೆಗಳ ನಂತರ ಇತ್ತೀಚೆಗೆ ಜಜ್ಜರ್​ಗೆ ಭೇಟಿ ನೀಡಿದಾಗ ಅವರ ವಕೀಲ ವಕೀಲ ಕರಣ್ ಸಿಂಗ್ ಗ್ರೆವಾಲ್​ರನ್ನು ಭೇಟಿಯಾದಗ ಸುದ್ದಿ ಮಾಧ್ಯಮಗಳ ಕಣ್ಣಿಗೆ ಬಿದ್ದು ಸದ್ಯ ವೈರಲ್ ಆಗಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net