ಬಡತನದಲ್ಲಿ ಬೆಂದು ಹೋಗಿರುವ ಅರುಣ್, ನಾಲ್ಕನೇ ತರಗತಿಯಲ್ಲಿ ಓದುತ್ತಿರುವಾಗಲೇ ಶಾಲೆ ಬಿಟ್ಟು ಹತ್ತನೇ ವಯಸ್ಸಿನಲ್ಲಿ ಕೆಲಸ ಮಾಡಲು ಶುರುಮಾಡಿದ. ಬಾಲ್ಯದ ಸುಂದರ ಕ್ಷಣಗಳು, ಆನಂದವನ್ನು ಬದಗಿಟ್ಟು, ತನ್ನ ಕುಟುಂಬವನ್ನು ಸಾಕಲು ಲಾರಿ ಕ್ಲೀನರ್ ಆಗಿ ನೆಹರು ಜೊತೆ ಸೇರಿಕೊಂಡ. ವಿದ್ಯಾಭ್ಯಾಸದಿಂದ ದೂರ ಉಳಿದ ಅರುಣ್, ಅದೊಂದು ವಿಡಿಯೋ ಮೂಲಕ ರಾತ್ರೋರಾತ್ರಿ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದ. ಅಂದಿನಿಂದ, ಅನೇಕರು ಅರುಣ್ ನಗೆಯ ದೃಶ್ಯವನ್ನು ತಮ್ಮ ಮೀಮ್ಗಳಲ್ಲಿ ಪದೇ ಪದೇ ಬಳಸುತ್ತಿದ್ದಾರೆ. ಇತ್ತೀಚೆಗಷ್ಟೇ ಅರುಣ್ ಕುಮಾರ್, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು, ಹೆತ್ತವರು ಹಾಗೂ ತನ್ನ ಗುರುವಾದ ಲಾರಿ ಚಾಲಕನ ಮುಖದಲ್ಲಿ ಮಂದಹಾಸ ಮೂಡಿಸಿದ್ದಾನೆ.