_1780924679666.webp?w=480&auto=format%2Ccompress&fit=max)
_1780924679666.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಶೋಷಿತರು,ಹಿಂದುಳಿದವರ್ಗಗಳು ಹಾಗೂ ಅಲೆಮಾರಿ ಸಮುದಾಯಗಳರಾಜಕೀಯ ಪ್ರಾತಿನಿಧ್ಯದ ಗುರಿಯೊಂದಿಗೆ‘ವಿಕಾಸಶೀಲ ಇನ್ಸಾನ್ ಪಾರ್ಟಿ’(ವಿಐಪಿ)ಭಾನುವಾರ ರಾಜ್ಯರಾಜಕಾರಣಕ್ಕೆ ಅಧಿಕೃತವಾಗಿಪ್ರವೇಶಿಸಿದೆ.
ಬೆಂಗಳೂರಿನಖಾಸಗಿ ಹೋಟೆಲ್ನಲ್ಲಿ ನಡೆದಸಮಾವೇಶದಲ್ಲಿ ಬಿಹಾರದ ಮಾಜಿಸಚಿವ ಹಾಗೂ ಪಕ್ಷದ ಸಂಸ್ಥಾಪಕಮುಕೇಶ್ ಸಹಾನಿ ಪಕ್ಷದ ರಾಜ್ಯಘಟಕಕ್ಕೆ ವಿದ್ಯುಕ್ತ ಚಾಲನೆನೀಡಿದರು. ಮುಂಬರುವಗ್ರಾಮ, ತಾಲೂಕುಮತ್ತು ಜಿಲ್ಲಾ ಪಂಚಾಯತ್ಚುನಾವಣೆಗಳಲ್ಲಿ ಸ್ಪರ್ಧಿಸುವಮೂಲಕ ರಾಜ್ಯದಲ್ಲಿ ಹೊಸ ರಾಜಕೀಯಶಕ್ತಿಯಾಗಿ ಹೊರಹೊಮ್ಮುವವಿಶ್ವಾಸವನ್ನು ವ್ಯಕ್ತಪಡಿಸಿರುವಸಹಾನಿ, ಸಾಮಾನ್ಯಮೀನುಗಾರರ ಕುಟುಂಬದಲ್ಲಿ ಜನಿಸಿ,ದಿನಕ್ಕೆ ಕೇವಲ30 ರೂಪಾಯಿಕೂಲಿಗೆ ಮುಂಬೈನಲ್ಲಿ ದುಡಿದುಬೆಳೆದ ತಾವು,ಶೋಷಿತ ಸಮಾಜದಹಕ್ಕುಗಳಿಗಾಗಿ ಹಾಗೂ ಅಧಿಕಾರಕ್ಕಾಗಿರಾಜಕೀಯ ಪ್ರವೇಶಿಸಿದ್ದಾಗಿತಿಳಿಸಿದರು.ನಾವು ಗುಡಿಸಲಿನಲ್ಲಿದ್ದರೂಬಾದಷಹರಾಗಿರುತ್ತೇವೆಯೇ ಹೊರತು,ಅಧಿಕಾರಕ್ಕಾಗಿಯಾರದೇ ಅರಮನೆಯಲ್ಲಿ ಗುಲಾಮರಾಗಿರುವುದಿಲ್ಲಎಂದು ಮಾರ್ಮಿಕವಾಗಿ ನುಡಿದರು.
ಪಕ್ಷದಉದ್ಘಾಟನಾ ಸಮಾವೇಶದಲ್ಲಿ ವಿವಿಧಮಠಾಧೀಶರು,ಸಾಧು-ಸಂತರು,ನೂರಾರು ಗುರೂಜಿಗಳು,ಜಾನಪದ ಕಲಾವಿದೆಮಂಜಪ್ಪ ಜೋಗತಿ,ದೆಹಲಿಯ ನಿವೃತ್ತಕಮಿಷನರ್ ಬಿ.ಕೆ.ಸಿಂಗ್,ಬಿಹಾರದಿಂದಆಗಮಿಸಿದ್ದ ಪಕ್ಷದ ನಾಯಕರುಉಪಸ್ಥಿತರಿದ್ದರು.
ರಾಷ್ಟ್ರಮಟ್ಟದಲ್ಲಿ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿರುವವಿಐಪಿ ಪಕ್ಷವು,ಜನಸಂಖ್ಯೆಗೆಅನುಗುಣವಾಗಿ ಮೀಸಲಾತಿ ಮತ್ತುಅಧಿಕಾರ ಹಂಚಿಕೆಯಾಗಬೇಕೆಂಬರಾಹುಲ್ ಗಾಂಧಿ ಅವರ ವಿಚಾರಧಾರೆಯನ್ನುಬೆಂಬಲಿಸುತ್ತದೆ ಎಂದು ಸಹಾನಿಸ್ಪಷ್ಟಪಡಿಸಿದರು.ಮುಂಬರುವ ಉತ್ತರಪ್ರದೇಶದ ಚುನಾವಣೆಯ ಬಳಿಕಕರ್ನಾಟಕದಾದ್ಯಂತ ವ್ಯಾಪಕ ‘ಸಂಕಲ್ಪಯಾತ್ರೆ’ ಕೈಗೊಂಡು,ರಾಜ್ಯದ ಮೂಲೆಮೂಲೆಯಲ್ಲಿರುವ ಶೋಷಿತ ಸಮುದಾಯಗಳನ್ನುಒಗ್ಗೂಡಿಸುವುದಾಗಿ ಅವರು ಘೋಷಿಸಿದರು.