ಈ ಐತಿಹಾಸಿಕ ಮೊದಲ ಪ್ರಾಯೋಗಿಕ ಹಾರಾಟದಲ್ಲಿ ಗ್ರಾಹಾ ಸ್ಪೇಸ್, ಕಾಸ್ಮೋಸರ್ವ್, ಡಿಕ್ಯೂಬ್ಡ್ ಸಂಸ್ಥೆಗಳ ತಂತ್ರಜ್ಞಾನ ಪ್ರದರ್ಶನ ಪೇಲೋಡ್‌ಗಳು ಹಾಗೂ ಸ್ಕೈರೂಟ್‌ನ ಸ್ವಂತ 'ಸ್ಕೋಪ್' (SCOPE) ಪ್ರಯೋಗದ ಉಪಕರಣಗಳನ್ನು ಯಶಸ್ವಿಯಾಗಿ ಕೊಂಡೊಯ್ಯಲಾಗಿದೆ. ಇವುಗಳ ಜೊತೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ಕೈಬರಹದಲ್ಲಿ ಬರೆದಿರುವ "ವಂದೇ ಮಾತರಂ" ಪೋಸ್ಟ್‌ಕಾರ್ಡ್, ಪ್ರಸ್ತುತ ಮತ್ತು ಮಾಜಿ ಇಸ್ರೋ ಅಧ್ಯಕ್ಷರುಗಳು, ಭಾರತೀಯ ಗಗನಯಾತ್ರಿಗಳು, ಸ್ಕೈರೂಟ್ ಉದ್ಯೋಗಿಗಳು, ಹೂಡಿಕೆದಾರರು ಹಾಗೂ ವಿಶ್ವದಾದ್ಯಂತದ ಬೆಂಬಲಿಗರ ಹಸ್ತಾಕ್ಷರಗಳಿರುವ ಸಂದೇಶಗಳನ್ನು ಒಳಗೊಂಡ ಸಾಂಕೇತಿಕ ಪೇಲೋಡ್‌ಗಳು ಸಹ ಈ ರಾಕೆಟ್ ಮೂಲಕ ಬಾಹ್ಯಾಕಾಶ ಸೇರಿವೆ.