ನಟ ವಿಜಯ್ರ ಟಿವಿಕೆಯು ಜಾತ್ಯತೀತ ಸಾಮಾಜಿಕ ನ್ಯಾಯದ ಅಡಿಯಲ್ಲಿ ರೂಪಗೊಂಡಿದ್ದು, ಬಿಜೆಪಿ ಮತ್ತು ಅದರ ಹಿಂದುತ್ವ ರಾಜಕಾರಣವನ್ನು ಬಹಿರಂಗವಾಗಿ ವಿರೋಧಿಸುತ್ತಿರುವ ವಿಜಯ್, ದ್ರಾವಿಡ ಸಿದ್ಧಾಂತ ಮತ್ತು ರಾಷ್ಟ್ರೀಯ ಜಾತ್ಯತೀತತೆಯ ಸಮ್ಮಿಶ್ರಣವನ್ನು ಬಯಸುತ್ತಿದ್ದಾರೆ. ಕೇಂದ್ರ ಸರ್ಕಾರದ ಪ್ರಬಲ ವಿರೋಧಿಯಾಗಿರುವ ಕಾಂಗ್ರೆಸ್ ಮತ್ತು ತಮಿಳುನಾಡಿನಲ್ಲಿ ಹೊಸ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮುತ್ತಿರುವ ವಿಜಯ್ರ ಸಿದ್ಧಾಂತ ಒಂದೇ ಆಗಿದೆ. ವಿಜಯ್ ಅಪಾರ ಯುವ ಅಭಿಮಾನಿ ಬಳಗವನ್ನು ಸೆಳೆದಿದ್ದು, ಇದರೊಂದಿಗೆ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬ್ಯಾಂಕ್ ಒಂದಾದರೆ, ಡಿಎಂಕೆ ಮತ್ತು ಎಐಎಡಿಎಂಕೆಗೆ ಪ್ರಬಲ ಪೈಪೋಟಿ ನೀಡಬಹುದು ಎಂಬುದು ಟಿವಿಕೆ ನಾಯಕರ ಲೆಕ್ಕಾಚಾರವಾಗಿದೆ.