ಸಿಎಂ ಆಗಿ ವಿಜಯ್ ಪಟ್ಟಾಭಿಷೇಕ: ಜನ ನಾಯಗನ್ ಸಿನಿಮಾ ರಿಲೀಸ್ ಬಗ್ಗೆ ನಿರ್ಮಾಪಕ KVN ಹೇಳಿದ್ದೇನು? Jana Nayagan
ಸೆನ್ಸಾರ್ ಪ್ರಮಾಣಪತ್ರ ಸಿಗುತ್ತಿದ್ದಂತೆ ಜನ ನಾಯಗನ್ ಬಿಡುಗಡೆ: ಕೆವಿಎನ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ತಮಿಳನಾಡು ಸಿಎಂ ಆಗಿ ವಿಜಯ್ ಪ್ರಮಾಣವಚನ
ಸೆನ್ಸಾರ್ ಪ್ರಮಾಣಪತ್ರ ಸಿಗುತ್ತಿದ್ದಂತೆ ಜನ ನಾಯಗನ್ ಬಿಡುಗಡೆ: ಕೆವಿಎನ್
ಮುಖ್ಯಮಂತ್ರಿ ದಳಪತಿ ವಿಜಯ್ಗೆ ಅಭಿನಂದನೆ ಸಲ್ಲಿಸಿದ ನಿರ್ಮಾಪಕ
ಚೆನ್ನೈ: ಭಾನುವಾರ (ಮೇ.10) ಚೆನ್ನೈನಲ್ಲಿ ನಟ, ರಾಜಕಾರಣಿ ದಳಪತಿ ವಿಜಯ್ ತಮಿಳನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೇ ಸಂದರ್ಭದಲ್ಲಿ ವಿಜಯ್ ಅಭಿನಯದ ಜನ ನಾಯಗನ್ (Jana Nayagan) ಸಿನಿಮಾದ ನಿರ್ಮಾಪಕರು ಚಲನಚಿತ್ರದ ಬಿಡುಗಡೆ ಬಗ್ಗೆ ಮೌನ ಮುರಿದಿದ್ದಾರೆ.
ವಿಜಯ್ ಪ್ರಮಾಣವಚನ ಸಮಾರಂಭಕ್ಕೆ ಆಗಮಿಸಿದ್ದ ಜನ ನಾಯಗನ್ ಸಿನಿಮಾದ ನಿರ್ಮಾಪಕ ಕೆ. ವೆಂಕಟ್ ನಾರಾಯಣ್ ಅಲಿಯಾಸ್ ಕೆವಿಎನ್, ನಾವು ಸಿ.ಬಿ.ಎಫ್.ಸಿ (CBFC) ಪ್ರಮಾಣ ಪತ್ರಕ್ಕಾಗಿ ಕಾಯುತ್ತಿದ್ದವೆ, ಅದು ದೊರೆತ ನಂತರ ಕೂಡಲೇ ನಾವು ಸಿನಿಮಾವನ್ನು ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ.
ಹಾಗೆಯೇ, ತಮಿಳನಾಡು ರಾಜ್ಯದ ಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿರುವ ವಿಜಯ್ ಅವರಿಗೆ ಅಭಿನಂದನೆ, ಇದು ಅವರ ಜೀವನದ ಹೊಸ ಅಧ್ಯಾಯವಾಗಿದ್ದು, ಜನರಿಗೆ ನೀಡಿರುವ ಮಾತನ್ನು ಅವರು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.
ಜನ ನಾಯಗನ್ ಸಿನಿಮಾ ಬಿಡುಗಡೆಗೆ ತಡೆಯೇಕೆ?
ಈ ಸಿನಿಮಾ ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ಎಂದು ಹೇಳಲಾಗಿದ್ದು, ಇದು ಜನವರಿ 9 ರಂದು ತೆರೆ ಕಾಣಲು ಸಿದ್ಧವಾಗಿತ್ತು. ಆದರೆ ಈ ಸಿನಿಮಾದಲ್ಲಿ ಕೆಲವು ಸೂಕ್ಷ್ಮ ವಿಷಯಗಳ ಬಗ್ಗೆ ಬೆಳಕು ಚೆಲ್ಲಿರುವ ಕಾರಣ ಸೆನ್ಸಾರ್ ಮಂಡಳಿ ಮತ್ತೊಮ್ಮೆ ಸಿನಿಮಾಗೆ ಕತ್ತರಿ ಹಾಕಿದೆ ಎಂದು ಹೇಳಲಾಗುತ್ತಿದೆ.
ಈ ಚಿತ್ರವು ರಾಜಕೀಯ ಪ್ರೇರಿತ ಕಥೆಯನ್ನು ಹೊಂದಿರುವುದರಿಂದ, ಸೆನ್ಸಾರ್ ಮಂಡಳಿಯು (CBFC) ಚಿತ್ರದ ಕೆಲವು ದೃಶ್ಯಗಳು ಅಥವಾ ಸಂಭಾಷಣೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು ಎನ್ನಲಾಗಿದೆ. ವಿವಾದಾತ್ಮಕ ವಿಷಯಗಳನ್ನು ಒಳಗೊಂಡಿರುವುದರಿಂದ ಚಿತ್ರಕ್ಕೆ ಪ್ರಮಾಣಪತ್ರ ಸಿಗುವುದು ತಡವಾಗಿದೆ,(ಏಜನ್ಸೀಸ್).