ಬಿಗ್ ಬಿ ಮನೆಯಲ್ಲಿ ಚಿನ್ನದ ಟಾಯ್ಲೆಟ್! ಅಮಿತಾಭ್ ಬಚ್ಚನ್ ಬಾತ್‌ರೂಮ್ ಸೆಲ್ಫಿ ಹಂಚಿಕೊಂಡ ನಟ ವಿಜಯ್ ವರ್ಮಾ..golden toilet

golden toilet
golden toilet
Published on
ಮುಂಬೈ:  ( golden toilet) ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ '2016'ರ ಹಳೆಯ ನೆನಪುಗಳನ್ನು ಹಂಚಿಕೊಳ್ಳುವ ಟ್ರೆಂಡ್ (2016 flashback trend) ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬಾಲಿವುಡ್ ನಟ ವಿಜಯ್ ವರ್ಮಾ ಅವರು ತಮ್ಮ 10 ವರ್ಷಗಳ ಹಿಂದಿನ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಫೋಟೋ ಈಗ ಭಾರೀ ವೈರಲ್ ಆಗುತ್ತಿದೆ.
ವಿಜಯ್ ವರ್ಮಾ ಅವರು ಅಮಿತಾಭ್ ಬಚ್ಚನ್ ಅವರ ಮನೆಯ ಬಾತ್‌ರೂಮ್‌ನಲ್ಲಿ ತೆಗೆಸಿಕೊಂಡ ಸೆಲ್ಫಿಯೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲಿರುವ ಟಾಯ್ಲೆಟ್ ಕಮೋಡ್ ಚಿನ್ನದ ಬಣ್ಣದಲ್ಲಿದ್ದು, ಇದನ್ನು ನೋಡಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.  
ಈ ಫೋಟೋಗಳನ್ನು ಹಂಚಿಕೊಂಡ ವಿಜಯ್ ವರ್ಮಾ, "2016 ನನ್ನ ಜೀವನದ ಮೈಲಿಗಲ್ಲು. ಅಮಿತಾಭ್ ಬಚ್ಚನ್ ಅವರ ಮನೆಯ ಗೋಲ್ಡನ್ ಟಾಯ್ಲೆಟ್ ಜೊತೆ ಸೆಲ್ಫಿ ತೆಗೆದುಕೊಂಡೆ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾದೆ ಮತ್ತು ಇರ್ಫಾನ್ ಖಾನ್ ಅವರನ್ನು ಭೇಟಿ ಮಾಡಿದೆ" ಎಂದು ಬರೆದುಕೊಂಡಿದ್ದಾರೆ.
2016ರಲ್ಲಿ ವಿಜಯ್ ವರ್ಮಾ ಅವರು ಅಮಿತಾಭ್ ಬಚ್ಚನ್ ಅವರೊಂದಿಗೆ 'ಪಿಂಕ್' ಸಿನಿಮಾದಲ್ಲಿ ನಟಿಸಿದ್ದರು. ಆ ಸಮಯದಲ್ಲಿ ಬಚ್ಚನ್ ಅವರ ಮನೆಗೆ ಭೇಟಿ ನೀಡಿದ್ದಾಗ ಈ ಫೋಟೋ ತೆಗೆದಿದ್ದಾರೆ.
ಈ ಫೋಟೋ ನೋಡಿದ ಅಭಿಮಾನಿಗಳು ನಿಜವಾಗಿಯೂ ಅದು ಚಿನ್ನದ್ದೇ? ಎಂದು ಪ್ರಶ್ನಿಸುತ್ತಿದ್ದಾರೆ. ಕೆಲವರು ವಿಜಯ್ ಲಗ್ಷರಿ ಟಾಯ್ಲೆಟ್ ನೋಡಿ ಸೆಲ್ಫಿ ತಡೆಹಿಡಿಯಲು ಸಾಧ್ಯವಾಗಿಲ್ಲ ಎಂದು ತಮಾಷೆ ಮಾಡಿದ್ದಾರೆ. ಅಮಿತಾಭ್ ಬಚ್ಚನ್ ಅವರ ಮನೆಯ ರಾಜವೈಭೋಗದ ಸಣ್ಣ ತುಣುಕನ್ನು ವಿಜಯ್ ವರ್ಮಾ ಅವರ ಈ ಹಳೆಯ ಫೋಟೋ ನೆಟ್ಟಿಗರಿಗೆ ತೋರಿಸಿಕೊಟ್ಟಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net