ಮೈತ್ರಿ ಮಾತುಕತೆ ವಿಫಲವಾದ ಬಳಿಕ ಎರಡೂ ಪಕ್ಷಗಳ ನಡುವೆ ಶೀತಲ ಸಮರ ಆರಂಭವಾಗಿತ್ತು. ಮಾರ್ಚ್ 2026 ರಲ್ಲಿ, ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ವಿಜಯ್ ಜೊತೆಗಿನ ಮೈತ್ರಿಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು. ವಿಜಯ್ ಕೂಡ ತಮ್ಮ ಪ್ರಚಾರದುದ್ದಕ್ಕೂ ಡಿಎಂಕೆ, ಬಿಜೆಪಿ ಮಾತ್ರವಲ್ಲದೆ ಎಐಎಡಿಎಂಕೆಯನ್ನು ತರಾಟೆಗೆ ತೆಗೆದುಕೊಂಡಿದ್ದರು. "ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ, ನಮ್ಮದು ಸ್ವತಂತ್ರ ಹಾದಿ" ಎಂದು ವಿಜಯ್ ಘೋಷಿಸಿದ್ದರು.