ತಮಿಳುನಾಡಿನಲ್ಲಿ ವಿಜಯ್-ತ್ರಿಶಾ ಹೊಸ ಕೆಮಿಸ್ಟ್ರಿ: 'ಟಿವಿಕೆ' ಸೇರ್ತಾರಾ ಚೆನ್ನೈ ಚೆಲುವೆ? ತಿರುಚಿ ಉಪಚುನಾವಣೆಗೆ ದಳಪತಿ ಮಾಸ್ ಪ್ಲಾನ್! Trisha political entry TVK

ತಮಿಳುನಾಡಿನಲ್ಲಿ ವಿಜಯ್-ತ್ರಿಶಾ ಹೊಸ ಕೆಮಿಸ್ಟ್ರಿ: 'ಟಿವಿಕೆ' ಸೇರ್ತಾರಾ ಚೆನ್ನೈ ಚೆಲುವೆ? ತಿರುಚಿ ಉಪಚುನಾವಣೆಗೆ ದಳಪತಿ ಮಾಸ್ ಪ್ಲಾನ್!
ತಮಿಳುನಾಡಿನಲ್ಲಿ ವಿಜಯ್-ತ್ರಿಶಾ ಹೊಸ ಕೆಮಿಸ್ಟ್ರಿ: 'ಟಿವಿಕೆ' ಸೇರ್ತಾರಾ ಚೆನ್ನೈ ಚೆಲುವೆ? ತಿರುಚಿ ಉಪಚುನಾವಣೆಗೆ ದಳಪತಿ ಮಾಸ್ ಪ್ಲಾನ್!
Published on

ಪ್ರಮುಖ ಮುಖ್ಯಾಂಶಗಳು

  • ಪೆರಂಬೂರ್ ಉಳಿಸಿಕೊಂಡು ತಿರುಚಿ ಈಸ್ಟ್ ಕ್ಷೇತ್ರಕ್ಕೆ ವಿಜಯ್ ರಾಜೀನಾಮೆ ಸಾಧ್ಯತೆ.
  • ತಿರುಚಿ ಉಪಚುನಾವಣೆಯಲ್ಲಿ ತ್ರಿಶಾ ಕೃಷ್ಣನ್ ಸ್ಪರ್ಧಿಸುವ ಬಗ್ಗೆ ಭಾರೀ ಚರ್ಚೆ.
  • ಮಹಿಳಾ ಮತದಾರರ ಸೆಳೆಯಲು ಮತ್ತು ಪಕ್ಷದ ವರ್ಚಸ್ಸು ಹೆಚ್ಚಿಸಲು ದಳಪತಿ ಪ್ಲಾನ್.
  • ರಾಜಕೀಯ ಅನುಭವ ಇಲ್ಲದ ಕಾರಣ ನಿರ್ಧಾರ ತೆಗೆದುಕೊಳ್ಳಲು ತ್ರಿಶಾ ಹಿಂಜರಿಕೆ.
ಚೆನ್ನೈ: ಬೆಳ್ಳಿತೆರೆಯ ಮೇಲೆ ಸೂಪರ್ ಹಿಟ್ ಜೋಡಿಯಾಗಿ ಮಿಂಚಿದ್ದ ದಳಪತಿ ವಿಜಯ್ ಮತ್ತು ತ್ರಿಶಾ ಕೃಷ್ಣನ್(Trisha political entry TVK) ಈಗ ರಾಜಕೀಯ ಅಖಾಡದಲ್ಲೂ ಒಂದಾಗುವ ಮುನ್ಸೂಚನೆ ಸಿಕ್ಕಿದೆ. ತಮಿಳುನಾಡು ಮುಖ್ಯಮಂತ್ರಿಯಾಗಲು ಸಿದ್ಧತೆ ನಡೆಸಿರುವ ವಿಜಯ್, ತಮ್ಮ ಪಕ್ಷವಾದ ತಮಿಳಗ ವೆಟ್ರಿ ಕಳಗಂ ಅನ್ನು ಬಲಪಡಿಸಲು ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಅವರನ್ನು ರಾಜಕೀಯಕ್ಕೆ ಕರೆತರಲು ಗಂಭೀರ ಚಿಂತನೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಕಾಲಿವುಡ್‌ನಿಂದ ಕೋಟೆಯವರೆಗೆ ಹಬ್ಬಿದೆ.

ಉಪಚುನಾವಣೆಯ ಅಖಾಡದಲ್ಲಿ ತ್ರಿಶಾ..?

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ವಿಜಯ್ ಅವರು ಪೆರಂಬೂರ್ ಮತ್ತು ತಿರುಚಿರಾಪಳ್ಳಿ ಪೂರ್ವ ಎಂಬ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡರಲ್ಲೂ ಭರ್ಜರಿ ಜಯ ದಾಖಲಿಸಿದ್ದರು. ಆದರೆ ಚುನಾವಣಾ ನಿಯಮದ ಪ್ರಕಾರ, ಒಬ್ಬ ವ್ಯಕ್ತಿ ಎರಡು ಕ್ಷೇತ್ರಗಳನ್ನು ಗೆದ್ದರೆ 14 ದಿನಗಳ ಒಳಗಾಗಿ ಯಾವುದಾದರೂ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಬೇಕು.
ಮೂಲಗಳ ಪ್ರಕಾರ, ವಿಜಯ್ ಅವರು ಪೆರಂಬೂರ್ ಕ್ಷೇತ್ರವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ಏಕೆಂದರೆ ಪೆರಂಬೂರ್‌ನಲ್ಲಿ ಅವರ ಗೆಲುವಿನ ಅಂತರ ದುಪ್ಪಟ್ಟಾಗಿದೆ ಮತ್ತು ಈ ಕ್ಷೇತ್ರವು ರಾಜ್ಯ ಸಚಿವಾಲಯಕ್ಕೆ ಹತ್ತಿರದಲ್ಲಿದೆ. ಇದರಿಂದಾಗಿ ಅವರು ತೆರವುಗೊಳಿಸಲಿರುವ ತಿರುಚಿರಾಪಳ್ಳಿ ಈಸ್ಟ್ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ತ್ರಿಶಾ ಕೃಷ್ಣನ್ ಅವರನ್ನು ಕಣಕ್ಕಿಳಿಸಲು ವಿಜಯ್ ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ.

ತ್ರಿಶಾಗೆ ವಿಜಯ್ ಮನವೊಲಿಕೆ ಕಸರತ್ತು

ತ್ರಿಶಾ ಅವರನ್ನು ರಾಜಕೀಯಕ್ಕೆ ಕರೆತರುವ ಮೂಲಕ ಪಕ್ಷಕ್ಕೆ ಮಹಿಳಾ ಮತದಾರರ ಬೆಂಬಲ ಮತ್ತು ಯುವಕರ ಕ್ರೇಜ್ ಅನ್ನು ಬಳಸಿಕೊಳ್ಳುವುದು ವಿಜಯ್ ಅವರ ತಂತ್ರವಾಗಿದೆ. ಈಗಾಗಲೇ ವಿಜಯ್ ಮತ್ತು ಟಿವಿಕೆ ಪಕ್ಷದ ಪ್ರಮುಖ ನಾಯಕರು ಈ ಬಗ್ಗೆ ತ್ರಿಶಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಆದರೆ, ಈವರೆಗೆ ಯಾವುದೇ ರಾಜಕೀಯ ಅನುಭವ ಇಲ್ಲದ ಕಾರಣ ತ್ರಿಶಾ ಅವರು ಈ ನಿರ್ಧಾರಕ್ಕೆ ಸ್ವಲ್ಪ ಹಿಂಜರಿಯುತ್ತಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ ಬೇರೆ, ರಾಜಕೀಯ ಬೇರೆ ಎಂಬ ಎಚ್ಚರಿಕೆಯ ಹಾದಿಯಲ್ಲಿರುವ ತ್ರಿಶಾರನ್ನು ಮನವೊಲಿಸಲು ವಿಜಯ್ ಖುದ್ದಾಗಿ ಮಾತುಕತೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ತಿರುಚಿ ಕೋಟೆಯಲ್ಲಿ ಟಿವಿಕೆ ಧ್ವಜ?

ತಿರುಚಿರಾಪಳ್ಳಿಯು ತಮಿಳುನಾಡಿನ ರಾಜಕೀಯ ಕೇಂದ್ರಬಿಂದುಗಳಲ್ಲಿ ಒಂದಾಗಿದೆ. ವಿಜಯ್ ಸ್ವತಃ ಅಲ್ಲಿ ಗೆದ್ದಿರುವುದರಿಂದ, ಆ ಕ್ಷೇತ್ರವನ್ನು ತಮ್ಮ ಪಕ್ಷದ ಕೈಯಲ್ಲೇ ಉಳಿಸಿಕೊಳ್ಳುವುದು ಅವರಿಗೆ ಪ್ರತಿಷ್ಠೆಯ ವಿಷಯವಾಗಿದೆ. ತ್ರಿಶಾರಂತಹ ಜನಪ್ರಿಯ ನಟಿಯನ್ನು ಕಣಕ್ಕಿಳಿಸಿದರೆ ಗೆಲುವು ಸುಲಭವಾಗಲಿದೆ ಎಂಬುದು ದಳಪತಿಯ ಲೆಕ್ಕಾಚಾರವಾಗಿದೆ.
ಒಂದು ವೇಳೆ ತ್ರಿಶಾ ಒಪ್ಪಿಕೊಂಡರೆ, ಲಿಯೋ ಮತ್ತು ಕುರುವಿ ಸಿನಿಮಾಗಳ ನಂತರ ಈ ಜೋಡಿ ಈಗ ರಾಜಕೀಯದ ವೇದಿಕೆಯ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳಲಿದೆ. ಇದು ತಮಿಳುನಾಡು ಚುನಾವಣಾ ಇತಿಹಾಸದಲ್ಲಿ ಅತ್ಯಂತ ಹೈ-ಪ್ರೊಫೈಲ್ ಉಪಚುನಾವಣೆಯಾಗುವುದರಲ್ಲಿ ಸಂಶಯವಿಲ್ಲ.

ರಾಜಕೀಯ ಲೆಕ್ಕಾಚಾರಗಳು

ವಿಜಯ್ ಅವರ ಈ ಮಾಸ್ ಮೂವ್ ಡಿಎಂಕೆ ಮತ್ತು ಎಐಎಡಿಎಂಕೆ ಪಾಳಯದಲ್ಲಿ ನಡುಕ ಹುಟ್ಟಿಸಿದೆ. ಈಗಾಗಲೇ 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿರುವ ಟಿವಿಕೆ, ಉಪಚುನಾವಣೆಯಲ್ಲಿ ಗೆದ್ದರೆ ವಿಜಯ್ ಅವರ ನಾಯಕತ್ವಕ್ಕೆ ಮತ್ತಷ್ಟು ಬಲ ಸಿಗಲಿದೆ. ತ್ರಿಶಾ ಅವರ ಎಂಟ್ರಿಯು ತಮಿಳುನಾಡಿನ ಗ್ಲಾಮರ್ ಪಾಲಿಟಿಕ್ಸ್‌ಗೆ ಹೊಸ ತಿರುವು ನೀಡಲಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net