ತಮಿಳುನಾಡಿನಲ್ಲಿ ವಿಜಯ್‌ 'ಸರ್ಕಾರ್​'; ಇಂದು ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿಯಾಗಿ 'ದಳಪತಿ' ಪದಗ್ರಹಣ!..Thalapathy Vijay

Thalapathy Vijay CM Oath
Thalapathy Vijay CM Oath
Published on

ಪ್ರಮುಖ ಮುಖ್ಯಾಂಶಗಳು

  • ಇಂದು ಹತ್ತುಗಂಟೆಗೆ ಸಿಎಂ ಆಗಿ ವಿಜಯ್​ ಪ್ರಮಾಣ ವಚನ ಸ್ವೀಕಾರ
  • ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ಭಾರಿ ಭದ್ರತೆ
  • ದ್ರಾವಿಡ ಪಕ್ಷಗಳ 60 ವರ್ಷಗಳ ಪ್ರಾಬಲ್ಯಕ್ಕೆ ಬ್ರೇಕ್ ಹಾಕಿದ ವಿಜಯ್.
ಚೆನ್ನೈ: ತಮಿಳುನಾಡಿನ ವಿಧಾನಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾಗಿ ಐದು ದಿನ ಕಳೆದ ಬಳಿಕ ಕೊನೆಗೂ ವಿಜಯ್​ ಸಾರಥ್ಯದಲ್ಲಿ ಸರ್ಕಾರ ರಚನೆಯಾಗಲು ಮುನ್ನುಡಿ ಬರೆಯಲಾಗಿದೆ. ಹಲವಾರು ಬಾರಿ ರಾಜ್ಯಪಾಲರ ಭೇಟಿ, ನಾಯಕರ ಜೊತೆ ಚರ್ಚೆ, ಬೆಂಬಲಕ್ಕೆ ಮನವಿ ತಂತ್ರಗಳ ನಂತರ ಇಂದು ಮುಂಜಾನೆ 10 ಗಂಟೆಗೆ ವಿಜಯ್​ ಸಿಎಂ ಗದ್ದುಗೆ ಏರಲು ಸಿದ್ಧರಾಗುತ್ತಿದ್ದಾರೆ.
ಹೌದು ಮೊದಲ ಬಾರಿ ಯಾವುದೇ ರಾಜಕೀಯ ನಾಯಕರ ಬೆಂಬಲವಿಲ್ಲದೇ ಚುನಾವಣೆಗೆ ನಿಂತ ವಿಜಯ್​​​ ಕಟ್ಟಿದ ಪಕ್ಷ 108 ಕ್ಷೇತ್ರಗಳಲ್ಲಿ ಗೆದ್ದು ಬೀಗಿದೆ, ಕಾಂಗ್ರೆಸ್​ ಮತ್ತು ಇತರ ಎಡಪಂಥೀಯ ಪಕ್ಷಗಳು ಬೆಂಬಲ ಕೊಟ್ಟ ನಂತರ ಐದು ದಿನಗಳ ಹೆಣಗಾಟಕ್ಕೆ ಬ್ರೇಕ್ ಬಿದ್ದಿತ್ತು. ಇಂದು ಮುಂಜಾನೆ 10 ಗಂಟೆಗೆ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಟಿವಿಕೆ ಮುಖ್ಯಸ್ಥ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಸ್ಟೇಡಿಯಂ ಸುತ್ತಮುತ್ತ ಭದ್ರತೆ

ಈಗಾಗಲೇ ಸ್ಟೇಡಿಯಂ ಸುತ್ತಮುತ್ತ ವಿಜಯ್​ ಬ್ಯಾನರ್​ಗಳನ್ನು ಹಾಕಿ, ಸಿಂಗರಿಸಿದ್ದು, ಜನದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಜೊತೆಗೆ ವಿಜಯ್​ ಅವರಿಗೂ ಭದ್ರತಾ ಪಡೆ ನಿಯೋಜಿಸಲಾಗಿದೆ. ಟಿವಿಕೆ ಮುಖ್ಯಸ್ಥ ವಿಜಯ್ ಅವರ ಬೆಂಬಲಿಗರು ಕ್ರೀಡಾಂಗಣದ ಹೊರಗೆ ಜಮಾಯಿಸಿ, ಟಿವಿಕೆಯ ಬಾವುಟ ಹಿಡಿದು, ಸಿಎಂ ಆಗಮನಕ್ಕಾಗಿ ಕಾದು ನಿಂತಿರುವ ದೃಶ್ಯಾವಳಿಗಳು ಕಂಡುಬಂದವೆ

ರಾಹುಲ್​ ಆಗಮನ

ವಿಜಯ್​ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ, ರಾಹುಲ್​ ಗಾಂಧಿಯವರು ಐಜಿಐ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದಾರೆ. ಜೊತೆಗೆ ಚೆನ್ನೈನಲ್ಲಿ ನಡೆಯಲಿರುವ ತಮಿಳುನಾಡು ನಿಯೋಜಿತ ಮುಖ್ಯಮಂತ್ರಿ ದಳಪತಿ ವಿಜಯ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಗೊಂದಲಕ್ಕೆ ಸಿಕ್ಕ ಬ್ರೇಕ್

ಕಳೆದ ಸೋಮವಾರ ಚುನಾವಣಾ ಫಲಿತಾಂಶ ಪ್ರಕಟವಾದಾಗಿನಿಂದ ರಾಜ್ಯದಲ್ಲಿ ತೀವ್ರ ರಾಜಕೀಯ ಚಟುವಟಿಕೆಗಳು ನಡೆದಿದ್ದವು. 234 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿತ್ತು. ವಿಜಯ್ ನೇತೃತ್ವದ ಟಿವಿ ಕೆ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ಯಾರ್ಯಾರ ಬೆಂಬಲ ಸಿಕ್ಕಿದೆ?

ಕಾಂಗ್ರೆಸ್ (5 ಶಾಸಕರು), ಸಿಪಿಐ ಮತ್ತು ಸಿಪಿಐ(ಎಂ) (4 ಶಾಸಕರು) ಬೆಂಬಲ ನೀಡಿದರೂ ವಿಜಯ್ ಬಳಿ 116 ಸಂಖ್ಯಾಬಲ ಮಾತ್ರವಿತ್ತು (ವಿಜಯ್ ಎರಡು ಕ್ಷೇತ್ರಗಳಲ್ಲಿ ಗೆದ್ದಿರುವುದರಿಂದ ಶಾಸಕರ ಸಂಖ್ಯೆ 107 ಆಗಿತ್ತು). ಆದರೆ ಶನಿವಾರ ಸಂಜೆ ವಿಜಿಸಿ ಪಕ್ಷದ ಇಬ್ಬರು ಶಾಸಕರು ಮತ್ತು ಐಯುಎಂಎಲ್ ಪಕ್ಷವು ಬೇಷರತ್ತಾಗಿ ಬೆಂಬಲ ಘೋಷಿಸಿದವು. ಇದರೊಂದಿಗೆ ವಿಜಯ್ ನೇತೃತ್ವದ ಮೈತ್ರಿಕೂಟದ ಸಂಖ್ಯಾಬಲ 120ಕ್ಕೆ ಏರಿಕೆಯಾಗಿದ್ದು, ಸರ್ಕಾರ ರಚನೆಗೆ ಹಾದಿ ಸುಗಮವಾಗಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net