ವಿಜಯ್-ರಶ್ಮೀಕಾ ಮದುವೆ ವಿಡಿಯೋ ಡೀಲ್; ಭಾರಿ ಮೊತ್ತದ ಓಟಿಟಿ ಆಫರ್ ತಿರಸ್ಕರಿಸಿದ ದೇವರಕೊಂಡ | Vijay-Rashmika wedding

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ
Published on
ಹೈದರಾಬಾದ್: ತೆಲುಗು ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ(Vijay-Rashmika wedding) ಶೀಘ್ರದಲ್ಲೇ ಮದುವೆಯಾಗುತ್ತಿರುವುದು ಎಲ್ಲರಿಗೂ ತಿಳಿದಿದೆ. ಈಗ ಈ ಮದುವೆಯ ವಿಡಿಯೋ ಸ್ಟ್ರೀಮಿಂಗ್ ಹಕ್ಕಿಗೆ ಒಟಿಟಿ ವೇದಿಕೆಯೊಂದು ಭಾರಿ ಮೊತ್ತದ ಆಫರ್ ನೀಡಿದ್ದು, ಅದನ್ನು ನಟ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.
ಇದೇ ತಿಂಗಳು 26ರಂದು ವಿಜಯ್-ರಶ್ಮಿಕಾ ಮದುವೆ ಆಗಲಿದ್ದು, ರಾಜಸ್ಥಾನದ ಉದಯಪುರ ಅರಮನೆಯಲ್ಲಿ ಅದ್ದೂರಿಯಾಗಿ ಸಮಾರಂಭ ನಡೆಯಲಿದೆ ಎನ್ನಲಾಗಿದೆ. ಈ ಕುರಿತಾದ ಕೆಲವು ವೀಡಿಯೊಗಳು ವೈರಲ್ ಆಗುತ್ತಿದ್ದು, ಮದುವೆ ಸಿದ್ದತೆ ಪ್ರಾರಂಭವಾಗಿವೆ ಎಂದು ಸೂಚಿಸುತ್ತದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಆದರೆ ಇಬ್ಬರು ಈ ಬಗ್ಗೆ ಯಾವುದನ್ನೂ ಅಧಿಕೃತವಾಗಿ ಘೋಷಿಸಿಲ್ಲ.
ಆದರೆ ಈಗ ಬರುತ್ತಿರುವ ಮಾಹಿತಿ ಪ್ರಕಾರ, ಪ್ರಮುಖ ಅಂತರರಾಷ್ಟ್ರೀಯ ಒಟಿಟಿ ಕಂಪನಿಯೊಂದು ಅವರ ವಿವಾಹ ವೀಡಿಯೊದ ಸ್ಟ್ರೀಮಿಂಗ್ ಹಕ್ಕುಗಳಿಗಾಗಿ ಭಾರಿ ಮೊತ್ತವನ್ನು ನೀಡಿದೆ. ಆದರೆ ವಿಜಯ್ ದೇವರಕೊಂಡ ಈ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ನಟ ತಮ್ಮ ವೈಯಕ್ತಿಕ ಜೀವನದ ಪ್ರಮುಖ ಸಮಾರಂಭವನ್ನು ವಾಣಿಜ್ಯೀಕರಣಗೊಳಿಸಲು ಬಯಸುವುದಿಲ್ಲ ಎಂದಿದ್ದು, ಅದಕ್ಕೆ ಎಷ್ಟೇ ಕೋಟಿ ಆಫರ್ ಕೊಟ್ಟರೂ ಸ್ವೀಕರಿಸಲಿಲ್ಲ ಎಂದು ಬಲ್ಲ ಮೂಲಗಳು ತಿಳಿಸಿವೆ. ಕುಟುಂಬ ಮತ್ತು ಆಪ್ತ ಸ್ನೇಹಿತರ ನಡುವೆ ಬಹಳ ಖಾಸಗಿಯಾಗಿ ಮದುವೆ ನಡೆಯಲು ಇಬ್ಬರು ಇಚ್ಚಿಸಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net