ತಮಿಳುನಾಡಿನ ಚುನಾವಣೆಯನ್ನು ಗೆಲ್ಲಲೇಬೇಕು ಎಂದು ಪಣತೊಟ್ಟ ವಿಜಯ್, ಬುದ್ಧಿವಂತಿಕೆಯಿಂದ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ನಿರ್ಧರಿಸಿದರು. ಅಲ್ಲಿಗೆ, ಅವರು ಮೊದಲೇ ತಾನು ಎರಡು ಕಡೆಯಿಂದ ಪೈಪೋಟಿ ನಡೆಸಿದರೆ, ಕಡೆಯ ಪಕ್ಷ ಒಂದರಲ್ಲಿ ಆದರೂ ಗೆಲುವು ಖಚಿತ ಎಂಬುದನ್ನು ತಿಳಿದಿದ್ದರು. ಹೀಗಾಗಿಯೇ, ಉತ್ತರ ಮತ್ತು ಮಧ್ಯ ತಮಿಳುನಾಡಿನಾದ್ಯಂತ ಬಲವಾದ ನೆಲೆಯನ್ನು ಸ್ಥಾಪಿಸಲು ಚೆನ್ನೈನ ಪೆರಂಬೂರು ಮತ್ತು ತಿರುಚಿರಾಪಳ್ಳಿ ಪೂರ್ವ ಕ್ಷೇತ್ರಗಳಿಂದ ಪ್ರತ್ಯೇಕವಾಗಿ ಸ್ಪರ್ಧಿಸುವುದಾಗಿ ಘೋಷಿಸಿದರು.