ದ್ರಾವಿಡ ಕೋಟೆಯಲ್ಲಿ ವಿಜಯ್ ಬಾವುಟ! ಎಡಪಕ್ಷಗಳ ಅಚ್ಚರಿಯ ನಡೆಗೆ ನಡುಗಿದ ವಿರೋಧಿಗಳು; ಚೆನ್ನೈನಲ್ಲಿ ಶುರುವಾಯ್ತು 'ವಿಜಯ್ ಸರ್ಕಾರ್' ಯುಗ! Vijay CM

ದ್ರಾವಿಡ ಕೋಟೆಯಲ್ಲಿ ವಿಜಯ್ ಬಾವುಟ! ಎಡಪಕ್ಷಗಳ ಅಚ್ಚರಿಯ ನಡೆಗೆ ನಡುಗಿದ ವಿರೋಧಿಗಳು; ಚೆನ್ನೈನಲ್ಲಿ ಶುರುವಾಯ್ತು 'ವಿಜಯ್ ಸರ್ಕಾರ್' ಯುಗ!
ದ್ರಾವಿಡ ಕೋಟೆಯಲ್ಲಿ ವಿಜಯ್ ಬಾವುಟ! ಎಡಪಕ್ಷಗಳ ಅಚ್ಚರಿಯ ನಡೆಗೆ ನಡುಗಿದ ವಿರೋಧಿಗಳು; ಚೆನ್ನೈನಲ್ಲಿ ಶುರುವಾಯ್ತು 'ವಿಜಯ್ ಸರ್ಕಾರ್' ಯುಗ!
Published on
ಚೆನ್ನೈ: ದಕ್ಷಿಣ ಭಾರತದ ರಾಜಕಾರಣದಲ್ಲಿ ಇಂದು ಹೊಸ ಇತಿಹಾಸ ಬರೆಯಲ್ಪಟ್ಟಿದೆ. ನಟ ವಿಜಯ್(Vijay CM) ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಮೈತ್ರಿಕೂಟವು ಅಂತಿಮವಾಗಿ ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ಅನ್ನು ತಲುಪಿದೆ. ಹಲವು ದಿನಗಳ ಹಗ್ಗಜಗ್ಗಾಟದ ನಂತರ, ಎಡಪಕ್ಷಗಳಾದ ಸಿಪಿಐ, ಸಿಪಿಐ(ಎಂ) ಮತ್ತು ವಿಸಿಕೆ (VCK) ವಿಜಯ್ ಅವರಿಗೆ ಬೆಂಬಲ ಘೋಷಿಸಲು ನಿರ್ಧರಿಸಿವೆ. ಈ ಮೂಲಕ ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳ 50 ವರ್ಷಗಳ ಏಕಸ್ವಾಮ್ಯಕ್ಕೆ ಅಧಿಕೃತವಾಗಿ ಬ್ರೇಕ್ ಬಿದ್ದಿದೆ.
ಸಂಖ್ಯಾಬಲದ ಲೆಕ್ಕಾಚಾರ: 118ರ ಗಡಿ ದಾಟಿದ ವಿಜಯ್ ಪಡೆ
ತಮಿಳುನಾಡು ವಿಧಾನಸಭೆಯ 234 ಸ್ಥಾನಗಳಲ್ಲಿ ಬಹುಮತ ಸಾಬೀತುಪಡಿಸಲು 118 ಶಾಸಕರ ಬೆಂಬಲ ಅಗತ್ಯವಿದೆ. ವಿಜಯ್ ಅವರ ಮೈತ್ರಿಕೂಟ ಈಗ ಈ ಗಡಿಯನ್ನು ದಾಟಿದೆ:
ಪಕ್ಷ                           ಗೆದ್ದ ಸ್ಥಾನಗಳು    
ತಮಿಳಗ ವೆಟ್ರಿ ಕಳಗಂ -   108
ಕಾಂಗ್ರೆಸ್ (INC)      -      05
ವಿಸಿಕೆ (VCK)       -      02
ಸಿಪಿಐ (CPI)         -    02
ಸಿಪಿಐ(ಎಂ)         -     02 
ಒಟ್ಟು ಮೊತ್ತ         -   119
ವಿಜಯ್ ಅವರು ಪೆರಂಬೂರು ಮತ್ತು ತಿರುಚಿರಾಪಳ್ಳಿ ಪೂರ್ವ ಎಂಬ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದ್ದು, ಒಂದು ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಮೈತ್ರಿಕೂಟದ ಸಂಖ್ಯಾಬಲ 118ಕ್ಕೆ ಇರಲಿದೆ. ಇದು ಸರ್ಕಾರ ರಚಿಸಲು ಬೇಕಾದ ನಿಖರವಾದ ಬಹುಮತವಾಗಿದೆ.

ಇಂದು ಸಂಜೆ ರಾಜ್ಯಪಾಲರ ಭೇಟಿ ಸಾಧ್ಯತೆ

ವಿಶ್ವಸನೀಯ ಮೂಲಗಳ ಪ್ರಕಾರ, ವಿಜಯ್ ಅವರು ಇಂದು ಸಂಜೆ ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದ್ದಾರೆ. ಮಧ್ಯಾಹ್ನ 4:30ಕ್ಕೆ ವಿಸಿಕೆ ಮತ್ತು ಎಡಪಕ್ಷಗಳು ಜಂಟಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಬೆಂಬಲವನ್ನು ಅಧಿಕೃತವಾಗಿ ಘೋಷಿಸಲಿವೆ.

ದೂರ ಸರಿದ ಬಿಜೆಪಿ: ತಟಸ್ಥ ನಿಲುವು

ಇದೇ ವೇಳೆ ತಮಿಳುನಾಡು ಬಿಜೆಪಿ ಘಟಕವು ಮಹತ್ವದ ನಿರ್ಧಾರ ಕೈಗೊಂಡಿದೆ. ಜನರು ನಮಗೆ ಸರ್ಕಾರ ರಚಿಸಲು ಜನಾದೇಶ ನೀಡಿಲ್ಲ, ಆದ್ದರಿಂದ ನಾವು ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಅಥವಾ ಸರ್ಕಾರ ರಚನೆಯ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ಬಿಜೆಪಿ ಅಧಿಕೃತ ಪ್ರಕಟಣೆ ಹೊರಡಿಸಿದೆ. ಇದು ವಿಜಯ್ ಅವರ ಸರ್ಕಾರ ರಚನೆಯ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿದೆ.

ದ್ರಾವಿಡ ರಾಜಕಾರಣದಲ್ಲಿ ಹೊಸ ಅಧ್ಯಾಯ

ದಶಕಗಳಿಂದ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಸುತ್ತುತ್ತಿದ್ದ ತಮಿಳುನಾಡು ರಾಜಕಾರಣ ಈಗ ಮೂರನೇ ಪಥದತ್ತ ತಿರುಗಿದೆ. ಸಿನಿಮಾ ವರ್ಚಸ್ಸಿನ ಜೊತೆಗೆ ಈಗ ಆಡಳಿತಾತ್ಮಕ ಜವಾಬ್ದಾರಿಯನ್ನು ಹೊತ್ತಿರುವ ವಿಜಯ್, ತಮ್ಮ 'ಸೋಷಿಯಲ್ ಜಸ್ಟಿಸ್' ಸಿದ್ಧಾಂತವನ್ನು ಹೇಗೆ ಜಾರಿಗೆ ತರುತ್ತಾರೆ ಎಂಬುದು ಇಡೀ ದೇಶದ ಕುತೂಹಲವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net