ಮತ್ತೊಂದೆಡೆ, ಟಿವಿಕೆ ಗೆದ್ದರೆ ರಾಜ್ಯವನ್ನು ಮಾದಕ ವಸ್ತು ಮುಕ್ತಗೊಳಿಸುವುದಾಗಿ ವಿಜಯ್ ತಮಿಳುನಾಡಿನ ಜನತೆಗೆ ಭರವಸೆ ನೀಡಿದ್ದಾರೆ. ನಿರುದ್ಯೋಗಿಗಳಿಗೆ 4,000 ರೂ. ಭತ್ಯೆ ಮತ್ತು ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು. ಯುವಕರಿಗೆ ಉದ್ಯೋಗ ಧನ ಸಹಾಯವಾಗಿ 20 ಲಕ್ಷ ರೂ. ಕೊಡಲಾಗುವುದು. ಇದರೊಂದಿಗೆ, ತಮಿಳುನಾಡಿನಲ್ಲಿ ಸ್ವಯಂಸೇವಕ ವ್ಯವಸ್ಥೆಯನ್ನು ಪರಿಚಯಿಸಲಾಗುವುದು ಎಂದು ಒತ್ತಿ ಹೇಳಿದ್ದಾರೆ. ಈಗ ಅಧಿಕಾರ ಚುಕ್ಕಾಣಿ ಹಿಡಿಯಲಿರುವ ವಿಜಯ್, ತಾವು ನೀಡಿರುವ ಭರವಸೆಗಳನ್ನು ಹೇಗೆ ಕಾರ್ಯರೂಪಕ್ಕೆ ತರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.