2025 ಫೆಬ್ರವರಿ 8ರಂದು ಖಾಸಗಿ ಹೋಟೆಲ್ನಲ್ಲಿ ಸಭೆ ಇತ್ತು. ಈ ವೇಳೆ ಅಯಾಜ್ 24 ವರ್ಚದ ಸಂತ್ರಸ್ತೆಗೆ ಮತ್ತು ಬರುವ ಪಾನೀಯ ಕೊಟ್ಟಿದ್ದಾನೆ. ಆಕೆಗೆ ಪ್ರಜ್ಞೆ ಬಂದಾಗ ಗೊತ್ತಾಗಿದ್ದು, ಆತ ಈಕೆಯ ಖಾಸಗಿ ಫೋಟೋ, ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದ ಎಂದು. ನಂತರ ಆಕೆಯ ಪತಿಗೆ ಕಳುಹಿಸುವುದಾಗಿ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ನಾಲ್ಕು ಲಕ್ಷರೂ ವಸೂಲಿ ಮಾಡಿದ್ದಲ್ಲದೇ, ಪದೇ ಪದೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಉಲ್ಲೇಖಿಸಲಾಗಿದೆ.