ಬಿಜೆಪಿಯು ಈಗಾಗಲೇ ಕೋಲ್ಕತ್ತಾದ ಮಾಜಿ ಪೊಲೀಸ್ ಆಯುಕ್ತ ರಾಜೇಶ್ ಕುಮಾರ್ರನ್ನು ಜಗತ್ದಳದಿಂದ ಕಣಕ್ಕಿಳಿಸಿದ್ದು, ಈಗ ಸಂತ್ರಸ್ತೆಯ ತಾಯಿಯ ಪ್ರವೇಶವು ಪಕ್ಷಕ್ಕೆ ಹೆಚ್ಚಿನ ನೈತಿಕ ಬಲ ನೀಡಲಿದೆ. ಮತ್ತೊಂದೆಡೆ, ಈ ಬೆಳವಣಿಗೆಯನ್ನು ಕುಟುಂಬದ ವೈಯಕ್ತಿಕ ನಿರ್ಧಾರ ಎಂದು ಕರೆದಿರುವ ಸಿಪಿಐ(ಎಂ) ನಾಯಕ ಮೊಹಮ್ಮದ್ ಸಲೀಂ, ಬಿಜೆಪಿ ಮತ್ತು ಟಿಎಂಸಿ ಎರಡನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಟಿಎಂಸಿ ಸಾಕ್ಷ್ಯ ನಾಶಪಡಿಸಿದರೆ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೂ ಇಂತಹ ಘಟನೆಗಳು ನಡೆದಿವೆ. ಸತ್ಯವನ್ನು ಹೊರಗೆಡವಲು ಈ ಎರಡೂ ಪಕ್ಷಗಳಿಗೆ ಆಸಕ್ತಿಯಿಲ್ಲ ಎಂದು ಅವರು ಆರೋಪಿಸಿದ್ದಾರೆ.