ನಕಲಿ ಎನ್‌ಕೌಂಟರ್‌ಗಳ ಕುರಿತಾಗಿಯೂ ಮಾತನಾಡಿದ ನ್ಯಾಯಮೂರ್ತಿ ಉಜ್ಜಲ್ ಭುಯಾನ್, ಇಂತಹ ಘಟನೆಗಳನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು, 2011 ರ ತೀರ್ಪನ್ನು ಉಲ್ಲೇಖಿಸಿದ ಅವರು, ನಕಲಿ ಎನ್‌ಕೌಂಟರ್‌ಗಳು ಕಾನೂನಿನ ಶಾಸನದ ಮೂಲ ತತ್ವವನ್ನೇ ನಾಶಪಡಿಸುತ್ತವೆ. ಕರ್ತವ್ಯನಿರತ ಪೊಲೀಸ್ ನಕಲಿ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿರುವುದು ಸಾಬೀತಾದರೆ ಅದನ್ನು ಗಂಭೀರ ಅಪರಾಧ ಎಂದು ಪರಿಗಣಿಸಬೇಕು ಎಂದರು. ಎನ್‌ಕೌಂಟರ್ ಸಂಸ್ಕೃತಿಯು ಒಂದು ಕ್ರಿಮಿನಲ್ ಮನಸ್ಥಿತಿಯಾಗಿದ್ದು, ಅದು ಎಂದಿಗೂ ಪೋಲಿಸಿಂಗ್‌ನ ಭಾಗವಾಗಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು(ಏಜೆನ್ಸೀಸ್).