ದಾರ್ಶನಿಕ ತತ್ವಗಳ ಮೇರುಕೃತಿ ‘ವೀರಶೈವ ಪಂಚಸೂತ್ರೀಯ ಪ್ರವಚನ’

ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ರಚಿಸಿದ ನೂತನ ವೀರಶೈವ ಪಂಚಸೂತ್ರೀಯ ಪ್ರವಚನ ಗ್ರಂಥ
ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ರಚಿಸಿದ ನೂತನ ವೀರಶೈವ ಪಂಚಸೂತ್ರೀಯ ಪ್ರವಚನ ಗ್ರಂಥ
Published on

ಪ್ರಮುಖ ಮುಖ್ಯಾಂಶಗಳು

  • ದಾರ್ಶನಿಕ ತತ್ವಗಳ ಮೇರುಕೃತಿ ‘ವೀರಶೈವ ಪಂಚಸೂತ್ರೀಯ ಪ್ರವಚನ’
  • ದಾರ್ಶನಿಕ ಸಾಹಿತ್ಯ ಕೃತಿಗಳ ಸಾಲಿಗೆ ನೂತನ ಸೇರ್ಪಡೆ
  • ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವದಲ್ಲಿ ಬಿಡುಗಡೆ

ಪ್ರಶಾಂತರಿಪ್ಪನ್‌ಪೇಟೆ,ಬೆಂಗಳೂರು :ಜಗತ್ತಿನಪ್ರತಿಯೊಬ್ಬ ಜೀವಿಗೂ ಬೇಕಾದಆತ್ಮಾನುಸಂಧಾನದ ಸತ್ಯ ದರ್ಶನದಪಥವನ್ನು ತೋರುವುದೇ ದಾರ್ಶನಿಕಶಾಸ್ತ್ರ. ಅಂತಹದಾರ್ಶನಿಕ ತತ್ವಗಳನ್ನೊಳಗೊಂಡಸಾಹಿತ್ಯ ಕೃತಿಗಳ ಸಾಲಿಗೆ ನೂತನಸೇರ್ಪಡೆ ‘ವೀರಶೈವ ಪಂಚಸೂತ್ರೀಯಪ್ರವಚನ’. ಇದೊಂದುಮಹಾಕಾವ್ಯ. ಒಂದುಕಾವ್ಯರಚನೆಗೆ ಇತಿಹಾಸ,ಪುರಾಣ,ತತ್ವಶಾಸ,ನಾಯಕ ಇತ್ಯಾದಿಲಕ್ಷಣಗಳಿವೆ.ಅಂತೆಯೇ ಮಹಾನ್ವಿದ್ವಾಂಸರು,ಪಂಡಿತರು,ತತ್ವಚಿಂತಕರುಆಗಿರುವ ಕಾಶಿ ಜ್ಞಾನಸಿಂಹಾಸನಮಹಾಪೀಠದ ಜಗದ್ಗುರು ಡಾ.ಚಂದ್ರಶೇಖರಶಿವಾಚಾರ್ಯ ಭಗವತ್ಪಾದರು ಸುಮಾರುಎರಡೂವರೆ ಸಾವಿರ ಶ್ಲೋಕಗಳಲ್ಲಿಈ ಮಹಾಕಾವ್ಯವನ್ನು ರಚಿಸಿದ್ದಾರೆ.ಈ ಕಾವ್ಯದಲ್ಲಿಆದಿ ಜಗದ್ಗುರು ಸದಾಶಿವನೇಮಹಾನಾಯಕನಾಗಿದ್ದು,ಆತನಿಂದಲೇಉತ್ಪತ್ತಿಯಾಗಿ,ಉಪದೇಶವನ್ನುಪಡೆದ ಜಗದ್ಗುರು ಪಂಚಾಚಾರ್ಯರುನಾಯಕರಾಗಿದ್ದಾರೆ.

ಪ್ರಾಚೀನಕಾಲದಿಂದಲೂ ಪಂಚಸೂತ್ರಗಳ ಉಲ್ಲೇಖ,ಪ್ರಸ್ತಾಪ,ಬಳಕೆಯಲ್ಲಿತ್ತು.ಆದರೆ ಆ ಪಂಚಸೂತ್ರಗಳವಿಸ್ತೃತ ವಿಶ್ಲೇಷಣೆ ಮಾಡುವಸಾಹಿತ್ಯ ಸಾಮಾಗ್ರಿ ಇರಲಿಲ್ಲ. ಈ ಕೊರತೆಯನ್ನುನೀಗಿಸಿದ ಮಹಾಕಾವ್ಯ ವೀರಶೈವಪಂಚಸೂತ್ರಾಣಿ ಗ್ರಂಥ.

ವೀರಶೈವಎಂಬುದು ಯಾವುದೋ ಜಾತಿ,ವರ್ಗ,ಪಂಗಡವನ್ನುಸೂಚಿಸುವ ಪದವಲ್ಲ.ಬದಲಾಗಿ ಶಿವ-ಜೀವರಆಧ್ಯಾತ್ಮ ಅನುಸಂಧಾನದ ಮಾರ್ಗ.ಈ ಮಾರ್ಗದಲ್ಲಿಹೋಗಬಯಸುವ ಯಾವುದೇ ವ್ಯಕ್ತಿತನ್ನ ಉತ್ಕಟ ಭಕ್ತಿ ಮತ್ತು ಯೋಗ್ಯತೆಯಮೂಲಕ ಗುರುವಿನಿಂದ ಇಷ್ಟಲಿಂಗದೀಕ್ಷೆಯನ್ನು ಸ್ವೀಕರಿಸಿ ಜೀವಾತ್ಮಪರಮಾತ್ಮನಾಗಿ ಬದಲಾಗುವ ಮಹಾಮಾರ್ಗದೊಳಗಿನ ಅಗಾಧ ದಾರ್ಶನಿಕವಿಚಾರಗಳೇ ಆದಿಜಗದ್ಗುರುಪಂಚಾಚಾರ್ಯರು ಪಂಚಮುನಿಗಳಿಗೆಬೋದಿಸಿದ ಪಂಚಸೂತ್ರಗಳು.

ಸರ್ವರಿಗೂತಿಳಿಯುವ ಸರಳ ಶೈಲಿ ಪ್ರವಚನ

ದಾರ್ಶನಿಕವಿಚಾರಗಳು ಸಾಮಾನ್ಯವಾಗಿ ಗೂಡಾರ್ಥ,ವಿಶೇಷಾರ್ಥಗಳಿಂದಕೂಡಿರುತ್ತವೆ.ಅದರಲ್ಲೂಪಂಚಸೂತ್ರಗಳು ಕೇವಲ ಒಂದು,ಎರಡು,ಮೂರು ಅಕ್ಷರಗಳಲ್ಲಿಸಕಲ ಸೃಷ್ಟಿಯ ರಹಸ್ಯವನ್ನೇಬೋದಿಸಿವೆ. ಅಂತಹಪಂಚಸೂತ್ರಗಳ ವ್ಯಾಖ್ಯಾನವು ಕೇವಲಪುಸ್ತಕಗಳಿಗೆ ಸೀಮಿತವಾಗಿ ಉಳಿಯದೆಮುಮುಕ್ಷುಗಳ ಮಸ್ತಕಕ್ಕೆ ತಲುಪಬೇಕೆಂಬಸದಿಚ್ಛೆಯೊಂದಿಗೆ ಡಾ.ಚಂದ್ರಶೇಖರ ಭಗವತ್ಪಾದರು ಈ ಪ್ರವಚನವನ್ನುಬರೆದಿದ್ದಾರೆ.

ಆಧ್ಯಾತ್ಮಿಕಸಾರವಿರುವ ಪುಸ್ತಕಗಳನ್ನುಓದುವುದು,ಓದಿದ್ದನ್ನುಅರ್ಥೈಸಿಕೊಳ್ಳುವುದು,ಅರ್ಥೈಸಿಕೊಂಡಿದ್ದನ್ನುಅರಗಿಸಿಕೊಳ್ಳುವುದು ಸಾಮಾನ್ಯರಿಗೆಅಸಾಧ್ಯ. ಈಹಿಂದೆ ಶ್ರೀಸಿದ್ಧಾಂತ ಶಿಖಾಮಣಿಯನ್ನುಕಾಶೀ ಜಗದ್ಗುರುಗಳು ‘ಪ್ರವಚನಪ್ರಭೆ’ ಎಂಬ ಹೆಸರಿನಲ್ಲಿ 2ಸಂಪುಟಗಳನ್ನುಹೊರತಂದು ದೇಶದ ಮೂಲೆ ಮೂಲೆಗೂತಲುಪಿಸುವಲ್ಲಿ ಯಶಸ್ವಿಯಾಗಿದ್ದರು.ಇಂದು ದೇಶ,ವಿದೇಶದ ಒಟ್ಟು22 ಭಾಷೆಗಳಿಗೆಶ್ರೀಸಿದ್ಧಾಂತ ಶಿಖಾಮಣಿಭಾಷಾಂತರಗೊಂಡು ಜನಪ್ರಿಯವಾಗಿದೆ.ಅದೇ ಮಾದರಿಯಲ್ಲಿವೀರಶೈವ ಪಂಚಸೂತ್ರೀಯ ದಾರ್ಶನಿಕಕಾವ್ಯವನ್ನು ಪ್ರವಚನ ಶೈಲಿಯಲ್ಲಿಪ್ರಕಟಿಸುವ ಮೂಲಕ ಕೇವಲ ಗೋತ್ರ-ಸೂತ್ರಪಟಕ್ಕೆ ಸೀಮಿತವಾಗಿದ್ದಪಂಚಸೂತ್ರಗಳನ್ನು ಓದುಗರ ಸ್ಮತಿಪಟಲಕ್ಕೆ ತರುವಲ್ಲಿ ಶ್ರಮಿಸಿದ್ದಾರೆ.

ಜಗದ್ಗುರುಡಾ.ಚಂದ್ರಶೇಖರಭಗವತ್ಪಾದರ ಸಾಹಿತ್ಯ ಪ್ರಭೆ

ಕಾಶೀಜಗದ್ಗುರು ಡಾ.ಚಂದ್ರಶೇಖರಭಗವತ್ಪಾದರು ರಚಿಸಿದ್ದ ಸಂಸ್ಕೃತಗ್ರಂಥವು ವಿವಿಧ ಪ್ರಾದೇಶಿಕಭಾಷೆಗಳಲ್ಲಿ ಶ್ಲೋಕಗಳ ಭಾವಾರ್ಥ(ಕಾರಿಕೆ,ಭಾಷ್ಯೆ)ಸಹಿತ ಪ್ರಕಟಗೊಂಡಿವೆ.ಆದರೆ ಪ್ರವಚನದಮೂಲಕ ಪಂಚ ಸೂತ್ರಗಳನ್ನು ವಿಶದವಾಗಿಈ ಕೃತಿಯಲ್ಲಿ ವಿವರಿಸಲಾಗಿದೆ.ವೀರಶೈವ ಸಿದ್ಧಾಂತಕ್ಕೆಪ್ರಮಾಣ ಗ್ರಂಥಗಳಾಗಿರುವ ಸ್ಮತಿ,ಆಗಮ,ಸಿದ್ಧಾಂತಶಿಖಾಮಣಿ ಇತ್ಯಾದಿ ಅನೇಕ ಪ್ರಾಚೀನಗ್ರಂಥಗಳ ಆಧಾರದಲ್ಲಿ ಪಂಚಸೂತ್ರಗಳನ್ನುವಿಸ್ತೃತವಾಗಿ ವ್ಯಾಖ್ಯಾನಿಸಲಾಗಿದೆ. ಇದರ ಪರಿಣಾಮಅತ್ಯಂತ ಸಾಮಾನ್ಯ ವ್ಯಕ್ತಿಯೂಕೂಡಾ ಈ ಗ್ರಂಥದ ಮೂಲಕ ಪಂಚಸೂತ್ರಗಳನ್ನುಅರ್ಥೈಸಿಕೊಳ್ಳಬಹುದು.ಮಾತ್ರವಲ್ಲಸ್ವಾಮೀಜಿಗಳು,ಪುರಾಣಿಕರು,ಪ್ರವಚನಕಾರರುಈ ಗ್ರಂಥದ ಆಧಾರದಲ್ಲಿ ವಿಶೇಷಪ್ರವಚನಗಳನ್ನು ಮಾಡಲು ಸಹಕಾರಿಯಾಗಲಿದೆ.ಒಟ್ಟಾರೆಪಂಚಸೂತ್ರೀಯ ಪ್ರವಚನ ಮಹಾಕಾವ್ಯವೀರಶೈವ ತತ್ವಾನುಯಾಯಿಗಳ ಪಾಲಿಗೆಒಂದು ಅಮೂಲ್ಯ ಗ್ರಂಥ.

ಯುಗಮಾನೋತ್ಸವದಲ್ಲಿಬಿಡುಗಡೆ

ಆದಿಜಗದ್ಗುರುಪಂಚಾಚಾರ್ಯರ ಯುಗಮಾನೋತ್ಸವವನ್ನುಪ್ರತಿವರ್ಷ ಚೈತ್ರ ಶುದ್ಧ ಪಂಚಮಿಯಂದುಮಾಡಲಾಗುತ್ತದೆ.ಅಂತೆಯೇ ಈ ಬಾರಿಮಾ.22 ಮತ್ತು23ರಂದುಹಾವೇರಿ ಜಿಲ್ಲೆಯ ನೆಗಳೂರುಹಿರೇಮಠದಲ್ಲಿ ಹಮ್ಮಿಕೊಳ್ಳಲಾಗಿತ್ತು.ಮಾ.23ರಂದುಜಗದ್ಗುರು ಪಂಚಪೀಠಾಧೀಶ್ವರರಸಾನ್ನಿಧ್ಯದಲ್ಲಿ ನಡೆದಕಾರ್ಯಕ್ರಮದಲ್ಲಿ ‘ವೀರಶೈವಪಂಚಸೂತ್ರೀಯ ಪ್ರವಚನ’ ಗ್ರಂಥಲೋಕಾರ್ಪಣೆಯಾಯಿತು.

ಏತಾನಿಪಂಚ ಸೂತ್ರಾಣೀ ಪಂಚಾಚಾರ್ಯಕೃತಾನಿಚ

ಆದ್ಯಾನಿತಿಪ್ರಸಿದ್ಧಾನಿ ಸೂತ್ರಾಣೀ ಖಲುಭಾರತೇ

ಜಗತ್ತಿನಎಲ್ಲ ವಿದ್ಯೆಗಳು ಕೂಡಾ ಸೂತ್ರರೂಪದಲ್ಲಿಯೇ ಪ್ರತಿಪಾದಿಸಲ್ಪಟ್ಟಿದ್ದು, ಆದಿ ಜಗದ್ಗುರುಪಂಚಾಚಾರ್ಯರು ಪ್ರತಿಪಾದಿಸಿದಶಿವಾದ್ವೆತ ಸಿದ್ಧಾಂತವು ಪಂಚಸೂತ್ರಗಳವಿಸ್ತೃತ ಭಾಗವಾಗಿದೆ.ಕ್ರಮವಾಗಿಜಗದ್ಗುರು ರೇಣುಕಾದಿ ಪಂಚಾರ್ಯರುಅಗಸ್ತ್ಯ, ದದೀಚಿ,ವ್ಯಾಸ,ಸಾನಂದ ಮತ್ತು ದುರ್ವಾಸ ಮುನಿಗಳಿಗೆ ಪಡ್ವಿಡಿ,ವೃಷ್ಟಿ,ಲಂಬನ,ಮುಕ್ತಾಗುಚ್ಛ,ಪಂಚವರ್ಣ ಹೀಗೆಪಂಚಸೂತ್ರಗಳ ಮೂಲಕ ಜೀವಾತ್ಮ,ಪರಮಾತ್ಮ,ಜಗತ್ತು,ಬಂಧ ಮತ್ತು ಮೋಕ್ಷ ಎಂಬ ದಾರ್ಶನಿಕ ವಿಷಯಗಳ ರಹಸ್ಯವನ್ನುವಿವರಿಸಿದ್ದಾರೆ.ಈ ಗ್ರಂಥದಲ್ಲಿ13 ಅಧ್ಯಾಯಗಳಿದ್ದು,ನಾಲ್ಕು ಯುಗಗಳಸಂಪೂರ್ಣ ವೃತ್ತಾಂತವನ್ನುವಿವರಿಸಲಾಗಿದೆ.

ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಪಂಚಸೂತ್ರಗಳ ಮೇಲೆ ಸಂಸ್ಕೃತದ ಅನುಷ್ಟುಪ್ ಛಂದಸ್ಸಿನಲ್ಲಿ ಬರೆದಿರುವ ಮಹಾಕಾವ್ಯದ ಮೂಲ ಗ್ರಂಥವು ಈಗಾಗಲೇ ಕಾಶೀ ಹಿಂದೂ ವಿಶ್ವವಿದ್ಯಾಲಯ ಮತ್ತು ಕಾಶಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯಗಳ ಶಾಸ್ತ್ರಿ ಪರೀಕ್ಷೆಗೆ ಪಠ್ಯ ಗ್ರಂಥವಾಗಿ ಸ್ವೀಕೃತಗೊಂಡಿದೆ. ಕೆಲವೇ ಅಕ್ಷರಗಳ, ಕೆಲವೇ ಪದಗಳಲ್ಲಿ ಅಗಾಧ ಸಾರವನ್ನು ಒಳಗೊಂಡಿರುವ ಸೂತ್ರಗಳ ವಿಸ್ತೃತ ಅರ್ಥವ್ಯಾಖ್ಯಾನ ಓದುಗರಿಗೆ ದೊರೆಯಬೇಕೆಂಬ ಮಹದಾಶಯದಿಂದ ಪೂಜ್ಯರು ಕನ್ನಡದಲ್ಲಿ ವೀರಶೈವ ಪಂಚಸೂತ್ರೀಯ ಪ್ರವಚನವನ್ನು ಬರೆದು ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.

ಶ್ರೀ ಜಗದ್ಗುರು ಪಂಚಾಚಾರ್ಯರು ಜಗತ್ತಿಗೆ ಬೋಧಿಸಿದ ದಾರ್ಶನಿಕ ಆದ್ಯಸೂತ್ರಗಳನ್ನು ಕುರಿತು ಈ ಕಾವ್ಯವು ರಚಿತವಾಗಿರುವುದರಿಂದ ಇದೊಂದು ದಾರ್ಶನಿಕ ಮಹಾಕಾವ್ಯ. ಈ ಕಾವ್ಯದ ತುಂಬೆಲ್ಲ ಗುರು ಹಾಗೂ ಇಷ್ಟದೇವರ ವಿಷಯಕವಾದ ರತಿಭಾವವು ಅಭಿವ್ಯಕ್ತವಾಗುವುದರಿಂದ ಇದು ನವರಸಗಳಲ್ಲಿ ಶಾಂತಿರಸ ಪ್ರಧಾನವಾಗಿದ್ದು, ಸರಸವೂ ಸರಳವೂ ಆಗಿರುವುದರಿಂದ ಇದು ಪ್ರಸಾದಗುಣ ದಿಂದ ಓತಪ್ರೋತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net